ಕೈಕಂಬ: ಅಯೋದ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದಲ್ಲಿ ನಮ್ಮ ಹಿರಿಯರ ಕನಸು ನನಸಾಗಿದೆ ನಾವು ದೇವರ ಸೇವೆ ಮಾಡಲು ಧರ್ಮ ರಾಜಕೀಯ ರಹಿತವಾಗಿ ನಮ್ಮ ವ್ಯಾಪ್ತಿಯ ಮನೆಮನೆಗಳಿಗೆ ಸಂಪರ್ಕಿಸಿ ನಿಧಿ ಸಂಗ್ರಹಕ್ಕೆ ನಮ್ಮಿಂದಾಗುವ ಅಳಿಲ ಸೇವೆಯನ್ನು ಮಾಡುವ ಎಂದುಪುತ್ತೂರು ಜಿಲ್ಲಾ ಮಾನ್ಯ ಸಂಘ ಚಾಲಕರಾದ ಕೊಡ್ಮಾನ್ ಕಾಂತಪ್ಪ ಶೆಟ್ಟಿ ಹೇಳಿದರು.

28vpayodhya

ಅವರು ಪೊಳಲಿ ರಾಮಕೃಷ್ಣ ತಪೋವನದಲ್ಲಿ ಡಿ.೨೭ ರಂದು ಭಾನುವಾರ ಕರಿಯಂಗಳ ಮಂಡಲದ ಅಯೋಧ್ಯ ಅಭಿಯಾನ ಸಮಾವೇಶದ ಸಭೆಯಲ್ಲಿ ಮಾತನಾಡಿದರು. ಕರಿಯಂಗಳ ಮಂಡಲದ ನಾಲ್ಕು ಗ್ರಾಮಗಳ ಹದಿನಾಲ್ಕು ಬೂತ್ ಪ್ರತಿನಿಧಿತ ಉಪವಸತಿಗಳಲ್ಲಿ ಪ್ರಮುಖರನ್ನು ಅಭಿಯಾನಕ್ಕೆ ಗುರುತಿಸಲಾಯಿತು. ಜಿಲ್ಲಾಸಂಘ ಚಾಲಕರು ಹಾಗೂ ಜಿಲ್ಲಾ ಸೇವಾ ಪ್ರಮುಖ್ ವೆಂಕಟ್ ರಮಣ ಬಲ್ಲುಕುರಾಯ ಆಯೋಧ್ಯ ಅಭಿಯಾನದ ಕುರಿತು ಮಾಹಿತಿ ನೀಡಿದರು.

28 ayodya

ಎಸ್ ಆರ್ ಸತೀಶ್ಚಂದ್ರ ಸಹಕಾರಿ ಭಾರತಿ ರಾಜ್ಯಧ್ಯಕ್ಷ ಎಸ್ ಆರ್ ಸತೀಶ್ಚಂದ್ರ , ರಾಮಕೃಷ್ಣ ತಪೋವನದ ಅಧ್ಯಕ್ಷ ಸ್ವಾಮಿ ವಿವೇಕ ಚೈತನ್ಯಾನಂದ ಉಪಸ್ಥಿತರಿದ್ದರು.ಬಂಟ್ವಾಳ ತಾಲೂಕು ಅಯೋದ್ಯ ಅಭಿಯಾನದ ಸಹ ಸಂಚಾಲಕ ದಾಮೋದರ ನೆತ್ತರೆಕೆರೆ ಸ್ವಾಗತಿಸಿದರು. ಕರಿಯಂಗಳ ಮಂಡಲ ಪ್ರಮುಖ್ ಕಿಶೋರ್ ವಯುಕ್ತಿಕ ಗೀತೆ ಹಾಡಿದರು.

By suddi9

Leave a Reply

Your email address will not be published. Required fields are marked *