ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಕಳೆದ ವರ್ಷ ನಡೆದ ಬ್ರಹ್ಮಕಲಶೋತ್ಸವದ ನಂತರ ಸಾನಿಧ್ಯದಲ್ಲಿ ಕೆಲಸಕಾರ್ಯಗಳು ನಡೆಯಲಿಕ್ಕಿದ್ದ ಕಾರಣ ದೇವಾಲಯದಲ್ಲಿ ಡಿ.೨೫ರಿಂದ ಡಿ.೨೮ರವರೆಗೆ ಪೂಜಾ ವಿಧಿವಿಧಾನಗಳು ಕ್ಷೇತ್ರದ ತಂತ್ರಿ ಕೃಷ್ಣ ತಂತ್ರಿ ಹಾಗೂ ಸುಬ್ರಹ್ಮಣ್ಯ ತಂತ್ರೀ , ವೇಂಕಟೇಶ್ ತಂತ್ರೀಯವರ ನೇತೃತ್ವದಲ್ಲಿ ದೇವಳದ ಅರ್ಚಕ ಮಾಧವ ಭಟ್, ನಾರಾಯಣ ಭಟ್, ಕೆ. ರಾಮ್ ಭಟ್, ಪರಮೇಶ್ವರ ಭಟ್, ವಿಷ್ಣು ಮೂರ್ತಿ ನಟ್ಟೋಜ,ಮಾಧವ ಮಯ್ಯ ಹಾಗೂ ದೇವಳದ ಸಿಬ್ಬಂದಿಗಳ ಸಹಕಾರದಲ್ಲಿ ಸೋಮವಾರ ದೇವರ ಸಂಕೋಚದ ವಿಧಿವಿಧಾನಗಳು ನೆರವೇರಿತು.28vp sankocha 1

ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ , ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ,ಮಾಜಿ ಸಚಿವ ರಮಾನಾಥ ರೈ, ಧಾರ್ಮಿಕ ಪರಿಷತ್ ಸದಸ್ಯ ಗಿರಿಪ್ರಕಾಶ್ ತಂತ್ರಿ ಪೊಳಲಿ ದೇವಳದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಯು.ತಾರಾನಾಥ ಆಳ್ವ, ಚೇರಾ ಸೂರ್ಯನಾರಾಯಣ ರಾವ್,ದೇವಳದ ಕಾರ್ಯನಿರ್ವಹಣಾಧಿಕಾರಿ ಪಿ.ಜಯಮ್ಮ, ಪ್ರಸನ್ನ ಕುಮಾರ್ ಶೆಟ್ಟಿ ಉಳಿಪಾಡಿಗುತ್ತು ,ಗಾಯತ್ರಿ ಪ್ರಶನ್ನ ಶೆಟ್ಟಿ, ತುಪ್ಪೆಕಲ್ಲು ಶ್ರೀ ಉಳ್ಳಾಕ್ಲು ಮಗ್ರಾಂತಾಯಿ ದೈವಸ್ಥಾನದ ಧರ್ಮದರ್ಶಿ ವಜ್ರನಾಭ ಶೆಟ್ಟಿ, ಜಿ.ಪಂ. ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ದೇವಪ್ಪ ಪೂಜಾರಿ, ದೇವ್‌ದಾಸ್ ಶೆಟ್ಟಿ, ತಾ.ಪಂ.ಸದಸ್ಯ ಯಶವಂತ ಪೂಜಾರಿ, ಕೃಷ್ಣಕುಮಾರ್ ಪೂಂಜ, ಶಿವಪ್ರಸಾದ್ ಶೆಟ್ಟಿ,ಕೃಷ್ಣ ರಾಜ್ ಮಾರ್ಲ,ರತ್ನರಾಜ ಶೆಟ್ಟಿ ಅರ್ಕುಳ ಬೀಡು, ಉದಯ ಆಳ್ವ ಉಳಿಪಾಡಿಗುತ್ತು, ಜೀವರಾಜ್ ಶೆಟ್ಟಿ ಅಮುಂಜೆಗುತ್ತು, ವೆಂಕಟೇಶ್ ನಾವಡ , ಮತ್ತಿತರರು ಇದ್ದರು.28vpsankocha

By suddi9

Leave a Reply

Your email address will not be published. Required fields are marked *