ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಫೆ.೧೩ ಶನಿವಾರದಿಂದ ಫೆ.೨೧ ಭಾನುವಾರದವರೆಗೆ ಧಾರ್ಮಿಕವಿಧಿ ವಿಧಾನಗಳೊಂದಿಗೆ ವಿವಿಧ ಕಾರ್ಯಕ್ರಮಗಳು ನಡೆಯಲಿದೆ.polali

ಫೆ.೧೩ ರಂದು ಶನಿವಾರ:

ಬೆಳಗ್ಗೆ ೭ ಗಂಟೆಗೆ ಪ್ರಾರ್ಥನೆ,ಪುಣ್ಯಾಹ ನಾಂದಿ, ಕಂಕಣಬಂಧ, ಪ್ರಾಯಶ್ಚಿತ್ತ ಪವಮಾನಹೋಮ, ಅಥರ್ವಶೀರ್ಷಹವನ, ಪ್ರಸನ್ನಪೂಜೆ, ಅನ್ನಸಂತರ್ಪಣೆ.

ಸಂಜೆ ೪.೩೦ ರಿಂದ ಪುಣ್ಯಾಹ , ತೋರಣ ಮಹೂರ್ತ, ಋತ್ವಿಗ್ವರಣೆ, ಸಪ್ತಶುದ್ದಿ, ಪ್ರಸಾದಶುದ್ದಿ, ರಾಕ್ಷೋಘ್ನಹವನ, ವಾಸ್ತುಪೂಜೆ, ವಾಸ್ತುಹೋಮ, ಸುದರ್ಶನಹವನ, ದಿಶಾಬಲಿ, ಅಸ್ತ್ರ ಕಲಶಪೂಜೆ, ಪ್ರಸನ್ನಪೂಜೆ.

ಫೆ.೧೪ ರಂದು ಭಾನುವಾರ:

ಬೆಳಗ್ಗೆ ೫ ಗಂಟೆಗೆ ಪುಣ್ಯಾಹ, ಗಣಪತಿಹವನ, ಮೃತ್ಯುಂಜಯಹವನ, ಸಪರಿವಾರ, ಶ್ರೀ ರಾಜರಾಜೇಶ್ವರೀ ದೇವರಿಗೆ ಕ್ಷಾಲನಾದಿ ಬಿಂಬಶುದ್ದಿ, ಶಾಂತಿಪ್ರಾಯಶ್ಚಿತ್ತ ಹೋಮಗಳು, ಹೋಮ ಕಲಶಾಭಿಷೇಕ, ಪ್ರಸನ್ನಪೂಜೆ,ಅನ್ನ ಸಂತರ್ಪಣೆ.

ಸಂಜೆ ೪.೩೦ರಿಂದ ಅಘೋರಹವನ, ದುರ್ಗಾಪೂಜೆ, ಪ್ರಸನ್ನಪೂಜೆ,

ಫೆ.೧೫ ರಂದು ಸೋಮವಾರ:

ಬೆಳಗ್ಗೆ ಬೆಳಗ್ಗೆ ೫ ಗಂಟೆಗೆ ಪುಣ್ಯಾಹ, ಗಣಪತಿಹವನ, ಶ್ರೀ ದುರ್ಗಾಪರಮೇಶ್ವರೀ ದೇವರಿಗೆ ಕ್ಷಾಲನಾದಿ ಬಿಂಬಶುದ್ದಿ, ಶಾಂತಿ ಪ್ರಾಯಶ್ಚಿತ್ತಹೋಮಗಳು, ಹೋಮಕಲಶಾಭಿಷೇಕ, ನವಗ್ರಹ ಹವನ, ಪ್ರಸನ್ನಪೂಜೆ ಅನ್ನಸಂತರ್ಪಣೆ.

ಸಂಜೆ ೪.೩೦ರಿಂದ ಶ್ರೀ ದುರ್ಗಾಪೂಜೆ, ಜಾತವೇದಸೇಮಂತ್ರ ಹವನ,ಪ್ರಸನ್ನ ಪೂಜೆ.

ಫೆ.೧೬ ರಂದು ಮಂಗಳವಾರ:

ಬೆಳಗ್ಗೆ ೫ ಗಂಟೆಗೆ ಪುಣ್ಯಾಹ, ಗಣಪತಿಹವನ, ರುದ್ರಯಾಗ,ಕಲಶಾಭಿಷೇಕಕುಂಬೇಶ, ಕರ್ಕರಿ ಪೂಜೆ, ಅಂಕುರಪೂಜೆ,ನಾಗಬನದಲ್ಲಿ ಪವಮಾನಹೋಮ, ಆಶ್ಲೇಷಾ ಬಲಿ, ಪಂಚವಿಂಶತಿಕಲಾಭಿಷೇಕ, ಪ್ರಸನ್ನ ಪೂಜೆ, ವಟು ಆರಾಧನೆ, ಅನ್ನ ಸಂತರ್ಪಣೆ.

ಸಂಜೆ ೪.೩೦ ಕ್ಕೆ ಶಿರಸ್ತತ್ವಹೋಮ, ಧ್ಯಾನಾದಿವಾಸಗಳು, ಶಕ್ತಿದಂಡಕಮಂಡಲಪೂಜೆ, ಅಧಿವಾಸಹೋಮಗಳು.

ಫೆ.೧೭ ರಂದು ಬುಧವಾರ:

ಬೆಳಗ್ಗೆ ೫ ಗಂಟೆಗೆ ಪುಣ್ಯಾಹ, ಗಣಪತಿಹವನ,ಪ್ರಾತ: ಕಾಲ ೮.೨೨ರಿಂದ ೮.೫೨ ಕ್ಕೆ ಒದಗುವ ಮೀನ ಲಗ್ನ ಸುಮೂಹೂರ್ತದಲ್ಲಿ ಶ್ರೀ ರಾಜರಾಜೇಶ್ವರೀ .ಶ್ರೀ ಸುಬ್ರಹ್ಮಣ್ಯ, ಶ್ರೀ ವಿನಾಯಕ, ಶ್ರೀ ಭದ್ರಕಾಳಿ ದೇವರುಗಳ ಜೀವಕಲಶಾಭಿಷೇಕ, ಪ್ರಸನ್ನಪೂಜೆ, ಶ್ರೀ ಕ್ಷೇತ್ರಪಾಲ ಬಿಂಬಪ್ರತಿಷ್ಠೆ, ಶ್ರೀ ಮಗೃಂತಾಯ ದೈವದ ಪ್ರತಿಷ್ಠೆ.ಅನ್ನ ಸಂತರ್ಪಣೆ.

ಸಂಜೆ ೪.೩೦ಕ್ಕೆ: ಭದ್ರಕಾಳಿ ಮಂಡಲ ಪೂಜೆ, ವನದುರ್ಗಾಹವನ, ಶ್ರೀ ಕೊಡಮಣಿತ್ತಾಯ ದೈವಕ್ಕೆ ೨೫ ಕಲಶಾಧಿವಾಸ, ಅಧಿವಾಸಹವನ, ಪ್ರಸನ್ನಪೂಜೆ,ಅನ್ನ ಸಂತರ್ಪಣೆ.

ಫೆ.೧೮ ರಂದು ಗುರುವಾರ:

ಬೆಳಗ್ಗೆ ೫ ಗಂಟೆಗೆ  ಪುಣ್ಯಾಹ, ಗಣಪತಿಹವನ, ಎಲ್ಲಾ ದೇವರುಗಳಿಗೆ ಶಾಂತಿ ಪ್ರಾಯಶ್ಚಿತ್ತ ಹವನಗಳು, ಚೋರಶಾಂತಿ, ಶ್ರೀ ಸುಬ್ರಹ್ಮಣ್ಯ ದೇವರಿಗೆ ಸಹಸ್ರಕದಲೀ ಹವನ, ಕೊಡಮಣಿತ್ತಯ ದೈವದ ಕಲಾಶಾಭಿಷೇಕ, ಕ್ಷೇತ್ರಪಾಲನಿಗೆ ಕಲಶಾಭಿಷೇಕ, ಉಳ್ಳಾಕ್ಲು-ಮಗೃಂತ್ತಾಯಿ ದೈವಕ್ಕೆ ಕಲಶಾಭಿಷೇಕ, ಪ್ರಸನ್ನ ಪೂಜೆ,ಅನ್ನ ಸಂತರ್ಪಣೆ.

ಸಂಜೆ ೪.೩೦ಕ್ಕೆ :ಕ್ಷೇತ್ರಪಾಲಾಧಿವಾಸ ಹೋಮಗಳು,ಕಲಶಾಧಿವಾಸ, ಶ್ರೀ ಚಕ್ರಪೂಜೆ, ಲಲಿತಾ ಸಹಸ್ರನಾಮ ಹವನ,ಅಷ್ಟಾವಧಾನ ಸೇವೆ, ಪ್ರಸನ್ನ ಪೂಜೆ, ಕಲಶ ಮಂಟಪ ಸಂಸ್ಕಾರ,ಅನ್ನ ಸಂತರ್ಪಣೆ.

ಫೆ.೧೯ ರಂದು ಶುಕ್ರವಾರ:

ಬೆಳಗ್ಗೆ ೫ ಗಂಟೆಗೆ ಪುಣ್ಯಾಹ, ಗಣಪತಿಹವನ, ಚಂಡಿಕಾಹೋಮ, ಸಪರಿವಾರ ಶ್ರೀ ರಾಜರಾಜೇಶ್ವರೀ ದೇವರಿಗೆ ಮತ್ತು ಶ್ರೀ ದುರ್ಗಾಪರಮೇಶ್ವರೀ ದೇವರಿಗೆ ತತ್ತ್ವ ಕಲಶಪೂಜೆ, ತತ್ತ್ವ ಹೋಮ, ಅಧ್ಬುತ ಶಾಂತಿಹೋಮ, ಸ್ವಶಾಂತಿ ಹೋಮ, ಹೋಮಕಲಶಾಭಿಷೇಕ, ತತ್ತ್ವ ಕಲಶಾಭಿಷೇಕ, ಕ್ಷೇತ್ರಪಾಲ ಪ್ರತಿಷ್ಠೆ, ವಿಷ್ಣುಸಹಸ್ರನಾಮ ಹವನ, ದುರ್ಗಾಹೋಮ, ಕುಂಬೇಶ ಕರ್ಕರಿ ಪೂಜೆ, ಮಂಡಲ ರಚನೆ, ಪ್ರಸನ್ನ ಪೂಜೆ,ಅನ್ನಸಂತರ್ಪಣೆ.

ಸಂಜೆ ೪.೩೦ಕ್ಕೆ :ಶ್ರೀ ರಾಜರಾಜೇಶ್ವರೀ ದೇವರಿಗೆ ೫೦೧ ಕಲಶಾಧಿವಾಸ, ಅಧಿವಾಸಹವನಗಳು, ಪರಿವಾರ ದೇವರುಗಳಿಗೆ ೧೦೮ ಕಲಶಾಧಿವಾಸ, ಅಧಿವಾಸಹವನಗಳು, ದುರ್ಗಾಪೂಜೆ,ಪ್ರಸನ್ನ ಪೂಜೆ,ಅನ್ನಸಂತರ್ಪಣೆ.

ಫೆ. ೨೦ ರಂದು ಶನಿವಾರ:

ಬೆಳಗ್ಗೆ ೫ ಗಂಟೆಯಿಂದ ಪ್ರಾತಃಪೂಜೆ ಪುಣ್ಯಾಹ, ಗಣಪತಿಹವನ,ಸಪರಿವಾರ ಶ್ರೀ ರಾಜರಾಜೇಶ್ವರೀ ಹಾಗೂ ಶ್ರೀ ದುರ್ಗಾಪರಮೇಶ್ವರೀ ದೇವರಿಗೆ ಪರಿಕಲಶಾಭಿಷೇಕ, ಗಂಟೆ ೮.೪೦ ಕ್ಕೆ ಮೀನಲಗ್ನದ ಸುಮೂಹೂರ್ತದಲ್ಲಿ ಧಾರ್ಮಿಕ ವಿಧಿ ವಿಧಾನಗಳೋಂದಿಗೆ “ಕಲಾಶಾಭಿಚೇಕ” ಅವಸೃತ ಬಲಿ, ಪಲ್ಲ ಪೂಜೆ ಅನ್ನ ಸಂತರ್ಪಣೆ.

ಸಂಜೆ ೫ ಗಂಟೆಗೆ ನಿತ್ಯ ಪೂಜೆ,ದೊಡ್ಡ ರಂಗಪೂಜೆ, ಉತ್ಸವ ಬಲಿ, ಚಂದ್ರಮಂಡಲ, ಷಷ್ಠಿರಥ, ಬೆಳ್ಳಿರಥೋತ್ಸವ,ಅಷ್ಟಾವಧಾನಸೇವೆ, ಪಲ್ಲಕಿ ಉತ್ಸವ.

ಫೆ. ೨೧ ರಂದು ಭಾನುವಾರ:

ಬೆಳಗ್ಗೆ ೬ ಗಂಟೆಗೆ ಪುನ್ಯಾಹ, ಮಂಗಳ ಗಣಪತಿ,ಹವನ,ಕಲಶಪೂಜೆ,ಕಲಶಾಭಿಚೇಕ, ಸಂಪ್ರೋಕ್ಷಣೆ, ಮಹಾಪೂಜೆ,ಅನ್ನ ಸಂತರ್ಪಣೆ. ಮಹಾಮಂತ್ರಾಕ್ಷತೆ ನಡೆಯಲಿದೆ  ಈ ಎಲ್ಲಾ ದೇವತಾ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಡಳಿತ ಮಂಡಳಿಯ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *