ಮೂಡುಬಿದರೆ: ಹೊಸಬೆಟ್ಟು ಸೇವಾ ಸಹಕಾರಿ ಸಂಘದ 2013-14ನೇ ಸಾಲಿನ ವಾಷರ್ಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಪದ್ಮಪ್ರಸಾದ್ ಜೈನ್ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಪ್ರಭಾರ) ಸಮಂತ್ ಕುಮಾರ್ ಸಂಘದ 2013-14ನೇ ಸಾಲಿನ ವಾಷರ್ಿಕ ವರದಿ ಹಾಗೂ ಲೆಕ್ಕಪರಿಶೋಧನಾ ವರದಿ ಮಂಡಿಸಿದರು.

mbd_oct17_2

 

ಸಂಘದಲ್ಲಿ ಒಟ್ಟು 17,93,183 ರೂ. ಸದಸ್ಯರ ಪಾಲು ಬಂಡವಾಳವಿದ್ದು. 3.14 ಕೋಟಿ ರೂ. ಠೇವಣಿಯಿದ್ದು ಕಳೆದ ಸಾಲಿಗಿಂತ 41 ಲಕ್ಷ ರೂ. ಠೇವಣಿ ಹೆಚ್ಚಳವಾಗಿರುತ್ತದೆ. 3.34 ಕೋಟಿ ಹೊರಬಾಕಿ ಸಾಲವಿದೆ. 13-14ನೇ ಸಾಲಿನಲ್ಲಿ ಸಂಘವು ಒಟ್ಟು ರೂ. 56ಲಕ್ಷ ಆದಾಯ ಗಳಿಸಿದ್ದು ಬಡ್ಡಿ ಮತ್ತು ಆಡಳಿತಾತ್ಮಕ ವೆಚ್ಚ ಕಳೆದು 5.69 ಲಕ್ಷ ರೂ. ನಿವ್ವಳ ಲಾಭ ಗಳಿಸಿದೆ. ಹಿಂದಿನ ವರ್ಷಕ್ಕಿಂತ 97 ಸಾವಿರ ರೂ. ಹೆಚ್ಚುವರಿ ಲಾಭ ಗಳಿಸಿದೆ. ಸದಸ್ಯರಿಗೆ ಶೇ. 12 ಡಿವಿಡೆಂಟ್ ನೀಡಲು ನಿರ್ಧರಿಸಲಾಗಿದೆ ಎಂದರು. ಸಂಘದ ವಾಷರ್ಿಕ ಸಭೆಯಲ್ಲಿ ಸಂಘದ ಆಡಳಿತಾಧಿಕಾರಿಯಾಗಿ ಈ ಹಿಂದೆ ಸೇವೆಗೈದಿರುವ ಪೊಲಿಕಾಪರ್್ ಪಿಂಟೋ ಹಾಗೂ ಪ್ರಗತಿಪರ ಕೃಷಿಕರಾದ ದಿನೇಶ್ ಶೆಟ್ಟಿ, ಲಾರೆನ್ಸ್ ಉರ್ಬನ್ ಮಿನೇಜಸ್, ರುಕ್ಕಯ್ಯ ಪೂಜಾರಿ, ರೀಕಯ್ಯ ಸಫಲಿಗ ಮತ್ತು ಮಹಾಬಲ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಮಹಾಸಭೆಯ ಬಳಿಕ ರೈತ ಸದಸ್ಯರಿಗೆ ಬ್ರಹ್ಮಾವರ ಕೃಷಿ ಅಧ್ಯಯನ ಕೇಂದ್ರದ ವತಿಯಿಂದ ತೋಟಗಾರಿಕೆಗೆ ಸಂಬಂಧಿಸಿದ ಕೃಷಿ ಮಾಹಿತಿಯನ್ನು ನೀಡಲಾಯಿತು. ಈ ಸಂದರ್ಭ ದಲ್ಲಿ ಸಂಘದ ಉಪಾಧ್ಯಕ್ಷೆ ರೀಟಾ ಕುಟಿನ್ಹಾ, ನಿದರ್ೇಶಕರಾದ ವೆಂಕಪ್ಪ ಕಕರ್ೆರಾ, ಮನೋಜ್ ಆಳ್ವಾರಿಸ್, ರಾಜೇಶ್ ಪೂಜಾರಿ, ಬೃಜಿತ್ ಕುಟಿನ್ಹಾ, ಸಂಜೀವ ನಾಯ್ಕ, ರೊನಾಲ್ಡ್ ಸೆರಾವೋ ಮತ್ತು ಶಿವರಾಮ ಪೂಜಾರಿ ಉಪಸ್ಥಿತರಿದ್ದರು. …………. ಎಂಬಿಡಿ_ಅಕ್ಟೋಬರ್17_2 ಹೊಸಬೆಟ್ಟು ಸೇವಾ ಸಹಕಾರಿ ಸಂಘ ಮಹಾಸಭೆಯಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.

By suddi9

Leave a Reply

Your email address will not be published. Required fields are marked *