ಮೂಡಬಿದ್ರೆ: ಕಾರ್ಮಿಕರು ಉಳಿದುಕೊಳ್ಳುವ ಶೆಡ್ಗೆ ನುಗ್ಗಿ ಮೊಬೈಲ್ ಹಾಗೂ ನಗದು ಕಳವು ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂದನ ವಿದಿಸಲಾಗಿದೆ.

ಬೆಳ್ತಂಗಡಿ ತಾಲ್ಲೂಕಿನ ಪೆರಿಂಜೆ ಗ್ರಾಮದ ಪರಿಶಿಷ್ಟ ಜಾತಿಯ ಪೂವ ಎಂಬವರ ಮಗ ಅಶೋಕ್(24) ಬಂದಿತ ಆರೋಪಿ. ಈತ ಇಲ್ಲಿನ ಮಸೀದಿ ರಸ್ತೆಯಲ್ಲಿ ನಿಮರ್ಾಣ ಹಂತದಲ್ಲಿರುವ ನೆಸ್ಟ್ ಶಾಪಿಂಗ್ನ ಕಾಮಗಾರಿ ನಡೆಸುತ್ತಿರುವ ಕಾಮರ್ಿಕರು ರಾತ್ರಿ ಉಳಿದುಕೊಂಡಿದ್ದ ಶೆಡ್ಗೆ ಮಂಗಳವಾರ ರಾತ್ರಿ ಆರೋಪಿ ತನ್ನ ಸ್ನೇಹಿತನ ಜತೆ ನುಗ್ಗಿ ಅಲ್ಲಿದ್ದ ಮೊಬೈಲ್ ಹಾಗೂ ನಗದು ಕಳವುಗೈದಿದ್ದ. ಒಟ್ಟು 3500 ರೂಪಾಯಿ ಮೌಲ್ಯದ ಸ್ವತ್ತುಗಳು ಕಳವಾಗಿದ್ದು, ಗುತ್ತಿಗೆದಾರ ಮಹಮ್ಮದ್ ಅಶ್ಪಾಕ್ ಪೋಲಿಸರಿಗೆ ದೂರು ನೀಡಿದ್ದರು. ಆರೋಪಿ ಅಶೋಕ್ನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
