ಬಂಟ್ವಾಳ:  ಮದುವೆ ಹಾಲ್ ನಲ್ಲಿ ಮಹಿಳೆಯರ ಬ್ಯಾಗ್,ಮಕ್ಕಳ ಕತ್ತು,ಕೈ,ಕಾಲಿನಿಂದ ಚಿನ್ನ ಕಸಿಯುವ ಘಟನೆಗೆ ಸಂಬಂಧಿಸಿ ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದ ಪೊಲೀಸರಿಂದ ಎರಡು ದಿನಗಳ ಹಿಂದೆ ಬಂಧಿಸಲ್ಪಟ್ಟ ಮಹಿಳೆಯ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಗಿದೆ. ನ.5 ಪಾಣೆಮಂಗಳೂರಿನ ಆಡಿಟೋರಿಯಂನಲ್ಲಿ  ನಡೆದ ಮದುವೆ ಸಮಾರಂಭದಲ್ಲಿ   ಕಲ್ಲಡ್ಕ ಸಮೀಪದ ಮದಕದ 2.5 ವರ್ಷದ ಮಗುವಿನ ಕಾಲಿನಲ್ಲಿದ್ದ 5 ಗ್ರಾಂನ ಚಿನ್ನದ ಚೈನ್  ಕಸಿದಿದ್ದು, ಇದೀಗ ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದಲ್ಲಿ ಪ್ರಕರಣ  ದಾಖಲಾಗಿದೆ.

ಕಲ್ಲಡ್ಕ ಸಮೀಪದ ಮದಕ ನಿವಾಸಿ  ಸಂಶಾದಬಾನು ಅವರ 2.5 ವರ್ಷದ ಮಗವಿನ ಕಾಲಿಗೆ ಜೋಡಿಸಿದ್ದ 5 ಗ್ರಾಂ ಚಿನ್ನದ ಚೈನನ್ನು ಮಹಿಳೆಯೊಬ್ಬರು ಎಗರಿಸಿದನ್ನು ಮಗು ತಾಯಿಯಲ್ಲಿ ತಿಳಿಸಿತ್ತು. ಎರಡುದಿನಗಳ ಹಿಂದೆ  ಪಾಣೆಮಂಗಳೂರಿನ ಆಡಿಟೋರಿಯಂ ನಲ್ಲಿ ಮಗುವೊಂದರ ಕತ್ತಿನ ಸರ ಕಸಿಯುವ ವೇಳೆ ಸಿಕ್ಕಿಬಿದ್ದಿದ್ದ ಆರೋಪಿ ಫಾತಿಮಾ ಸಹನಾಜ್ ಬಂಧಿಸಲ್ಪಟ್ಟಿದ್ದು, ಈಕೆಯೇ ಈ  ಕಳವು  ಮಾಡಿರುವುದು ಪೊಲೀಸರ ತನಿಖೆಯಿಂದ ಬಯಲಿಗೆ ಬಂದಿದೆ.

ಕಳವಾದ ಚಿನ್ನದ ಮೌಲ್ಯ 20 ಸಾ.ರೂ.ಎಂದು ಅಂದಾಜಿಸಲಾಗಿದೆ. ಈ  ಬಗ್ಗೆ ಸಂಶಾದಬಾನು ಅವರ ದೂರಿನಂತೆ ಬಂಟ್ವಾಳ ನಗರ ಠಾಣೆಯ ಅಪರಾಧ ವಿಭಾಗದ ಎಸ್. ಐ. ಕಲೈಮಾರ್ ಕೇಸು ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ. ಬಂಧಿತ ಆರೋಪಿ ಫಾತಿಮಾಳನ್ನು  ಹೆಚ್ಚಿನ ವಿಚಾರಣೆಗಾಗಿ ಸೋಮವಾರ ಪೊಲೀಸ್ ಕಸ್ಟಡಿಗೆ ಪಡೆಯುವ ಸಾಧ್ಯತೆ ಇದೆ.

By suddi9

Leave a Reply

Your email address will not be published. Required fields are marked *