ಜಹೀರ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಇಶಾಂತ್
ವೆಲ್ಲಿಂಗ್ಟನ್: ಟೀಂ ಇಂಡಿಯಾದ ವೇಗದ ಬೌಲರ್ ಇಶಾಂತ್ ಶಮರ್ಾ ತನ್ನ ಸಹ ಆಟಗಾರ ಮತ್ತು ತಂಡದ ಹಿರಿಯ ಸದಸ್ಯ ಜಹೀರ್ ಖಾನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ ಘಟನೆ ವೆಲ್ಲಿಂಗ್ಟನ್ ಟೆಸ್ಟ್ನಲ್ಲಿ ನಡೆದಿದೆ.
ಪಂದ್ಯದ ನಾಲ್ಕನೇ ದಿನ ಶತಕ ವೀರ ಮೆಕಲ್ಲಮ್ ಮತ್ತು ವ್ಯಾಟ್ಲಿಂಗ್ ಕ್ರೀಸ್ನಲ್ಲಿದ್ದರು. ಈ ವೇಳೆ ಇಶಾಂತ್ನ ಒಂದು ಎಸೆತವನ್ನು ಮೆಕಲ್ಲಮ್ ಡೀಪ್ ಸ್ಕ್ವ್ಯಾರ್ ಲೆಗ್ನತ್ತ ಬಾರಿಸಿದ್ದರು. ಅಲ್ಲಿ ಫೀಲ್ಡಿಂಗ್ ನಡೆಸುತ್ತಿದ್ದ ಜಹೀರ್ ಖಾನ್ ಚೆಂಡನ್ನು ಎತ್ತಿ ಬಿಸಾಡುವಲ್ಲಿ ಸ್ವಲ್ಪ ಅಧಿಕ ಸಮಯ ತೆಗದುಕೊಂಡಿದ್ದರು. ಅದಾಗಲೇ ಬ್ಯಾಟ್ಸ್ಮ್ಯಾನ್ಗಳು ಮೂರು ರನ್ ಓಡಿಯಾಗಿತ್ತು. ಇದರಿಂದ ಆಕ್ರೋಶಗೊಂಡ ಇಶಾಂತ್ ಮರಳಿ ಬೌಲಿಂಗ್ ನಡೆಸಲು ತೆರಳಿದಾಗ ಜಹೀರ್ನನ್ನು ಅವಾಚ್ಯ ಶಬ್ದಗಳಿಂದ ಬೈಯ್ದುಕೊಂಡಿದ್ದರು. ಆತನ ಮಾತುಗಳು ವಿಕೆಟ್ ಪಕ್ಕ ಇರಿಸಲಾಗುವ ಮೈಕ್ರೊಫೋನ್ನಲ್ಲಿ ದಾಖಲಾಗಿದೆ. ಈ ಬೈಯ್ಗುಳಗಳು ವೀಕ್ಷಕ ವಿವರಣೆಗಾರರಿಗೆ ಮತ್ತು ಟಿವಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದವರಿಗೆ ಸ್ಪಷ್ಟವಾಗಿ ಕೇಳಿಸಿಕೊಂಡಿದೆ. ಇದೇ ಮಾದರಿಯ ಘಟನೆ ಕಳೆದ ವರ್ಷ ವಿಂಡೀಸ್ ವಿರುದ್ಧದ ಪಂದ್ಯದ ವೇಳೆಯೂ ನಡೆದಿದ್ದು, ತನ್ನ ಎಸೆತದಲ್ಲಿ ಕ್ಯಾಚ್ವೊಂದನ್ನು ಕೈಚೆಲ್ಲಿದ ಸುರೇಶ್ ರೈನಾನನ್ನು ರವೀಂದ್ರ ಜಡೇಜಾ ಮೈದಾನದಲ್ಲೇ ನಿಂದಿಸಿದ್ದರು. ಟೀಂ ಇಂಡಿಯಾದಲ್ಲಿ ಈ ಬೆಳವಣಿಗೆಯು ಆಘಾತಕಾರಿಯಾಗಿದ್ದ ಕ್ರಿಕೆಟ್ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.

222p

By suddi9

Leave a Reply

Your email address will not be published. Required fields are marked *