ಬಂಟ್ವಾಳ: ಮಣಿನಾಲ್ಕೂರು ಗ್ರಾಮದ ಬಾಚಕೆರೆ   ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ   ಶ್ರೀ ಭ್ರಮರಾಂಬಿಕ ಸೇವಾ ಸಂಘದ ವತಿಯಿಂದ ಲೋಕ ಕಲ್ಯಾಣಾರ್ಥವಾಗಿ  ಶ್ರೀ ಕ್ಷೇತ್ರ ಕಟೀಲಿಗೆ ದ್ವಿತೀಯ ವರ್ಷದ ಪಾದಯಾತ್ರೆ ಅಮ್ಮನೆಡೆಗೆ ನಮ್ಮ ನಡಿಗೆ ಕಾರ್ಯಕ್ರಮಕ್ಕೆ  ಗುರುವಾರ  ಶ್ರೀ ಕ್ಷೇತ್ರ ಬಾಚಕೆರೆಯಲ್ಲಿ ಚಾಲನೆ ನೀಡಲಾಯಿತು.    ಕ್ಷೇತ್ರದ ಧರ್ಮದರ್ಶಿ ದೇಚಪ್ಪ ಬಾಚಕೆರೆ ಅವರು ಪಾದಯಾತ್ರೆಗೆ ಚಾಲನೆ ನೀಡಿ ಮಾತನಾಡಿ, ಶ್ರೀ ಭ್ರಮರಾಂಬಿಕಾ ಸೇವಾ ಸಂಘದ ಮೂಲಕ ಲೋಕ ಕಲ್ಯಾಣಾರ್ಥವಾಗಿ ಶ್ರೀ ಕ್ಷೇತ್ರ ಕಟೀಲಿಗೆ ನಡೆಸುವ ಪಾದಯಾತ್ರೆ ಸೇವೆಯಿಂದ ಸರ್ವರಿಗೂ ಮಂಗಳವಾಗಲಿ ಎಂದು  ಶುಭ ಹಾರೈಸಿದರು.  0312pkt1

 ದೇವಸ್ಥಾನದ ಪ್ರ. ಅರ್ಚಕ ಪ್ರಸಾದ್ ಐತಾಳ್ ಸರಪಾಡಿ ಅರಮನೆ, ಪ್ರಮುಖರಾದ ಶಂಕರ ನಾರಾಯಣ ಹೊಳ್ಳ ಸರಪಾಡಿ, ಸಾಯಿ ಶಾಂತಿ ಕೋಕಲ, ಪ್ರಸಾದ್ ಶಾಂತಿ ಬಲಯೂರು, ಸರಪಾಡಿ ಅಶೋಕ ಶೆಟ್ಟಿ, ಪುರುಷೋತ್ತಮ ಪೂಜಾರಿ ಮಜಲು, ಸಂಪತ್ ಕುಮಾರ್ ಶೆಟ್ಟಿ ಮುಂಡ್ರೇಲ್ ಗುತ್ತು, ಸಂತೋಷ್ ಶೆಟ್ಟಿ ಸರಪಾಡಿ, ಶ್ರೀ ಭ್ರಮರಾಂಬಿಕಾ ಸೇವಾ ಸಂಘದ ಅಧ್ಯಕ್ಷ ಪ್ರದೀಪ್ ರೈ ಮಾವಿನಕಟ್ಟೆ,  ಪದಾಽಕಾರಿಗಳಾದ ಪುರುಷೋತ್ತಮ ಕಾಯರ್ ಪಲ್ಕೆ, ಶಿವರಾಮ ಶೆಟ್ಟಿ ದೋಟ, ಮೋನಪ್ಪ ಪೂಜಾರಿ ಮತ್ತಿತರರು ಭಾಗವಹಿಸಿದ್ದರು. ಪಾದಯಾತ್ರೆಯಲ್ಲಿ ೯೦ ಮಂದಿ ಭಕ್ತರು ಪಾಲ್ಗೊಂಡಿದ್ದರು.

By suddi9

Leave a Reply

Your email address will not be published. Required fields are marked *