ಬಂಟ್ವಾಳ: ಬಿ.ಸಿ.ರೋಡಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ರಬ್ಬರ್ ಮತ್ತು ಜೇನು ವ್ಯವಸಾಯಗಾರರ ವಿವಿಧ್ದೋದ್ದೇಶ ಸಹಕಾರಿ ಸಂಘವು ಪ್ರಸಕ್ತ ಸಾಲಿನಲ್ಲಿ 8.86 ಲಕ್ಷ ರೂ.ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಎ. ಸತೀಶ್ಚಂದ್ರ ಹೊಸಮನೆ ತಿಳಿಸಿದ್ದಾರೆ. ಬಂಟ್ವಾಲಮ ತಾ.ಪಂ ಎಸ್ ಜಿಎಸ್ ವೈ ಸಭಾಂಗಣದಲ್ಲಿ ಗುರುವಾರ ನಡೆದ ಸಂಘದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 2.93.377 ರೂ.ವಿನ ಜೇನು ಪರಿಕರಗಳನ್ನು ಮಾರಾಟ ಮಾಡಿರುತ್ತದೆ ಎಂದರು.ಸಂಘವು 992 ಎ ತರಗತಿ ಸದಸ್ಯರನ್ನು ಹೊಂದಿದ್ದು, ೫,೦೩,೩೫,೫೧೬ ಸಾಲ ವಿತರಿಸಲಾಗಿದೆ. ರೂ. ೭,೮೨,೭೧,೧೦೭ ಠೇವಣಾತಿಯನ್ನು ಹೊಂದಿದೆ ಎಂದು ಅವರು ತಿಳಿಸಿದರು. 

ನಿರ್ದೇಶಕರಾದ ಬಿ.ಪದ್ಮಶೇಖರ ಜೈನ್, ತಿಮ್ಮಪ್ಪ ಪೂಜಾರಿ ಕುಕ್ಕಿಪ್ಪಾಡಿ, ರಾಘವಪೂಜಾರಿ ಪುನಚ, ಈಶ್ವರ ಭಟ್ ಬೋಳಂತೂರು, ಕಾಂಚಲಾಕ್ಷಿ ಮಣಿನಾಲ್ಕೂರು, ಉಮ್ಮರ್ ಮಂಚಿ, ಎ.ಕೆ.ಹ್ಯಾರೀಸ್ ಮಂಚಿ ಸೇರಿದಂತೆ ಎಲ್ಲಾ ನಿರ್ದೆಶಕರು ಉಪಸ್ಥಿತರಿದ್ದರು. ಉಪಾಧ್ಯಕ್ಷ ಮೋಹನ ಪಿ.ಎಸ್. ಸ್ವಾಗತಿಸಿದರು. ಮುಖ್ಯಕಾರ್ಯನಿವಹರ್ಣಾಧಿಕಾರಿ ಗುಣಶೇಖರ ಕೆ. ವಂದಿಸಿದರು. ಈ ಸಂದರ್ಭದಲ್ಲಿ ನಿವೃತ್ತರಾದ ಸಿಬ್ಬಂದಿ ಚಂದ್ರಪ್ರಕಾಶ ಇವರನ್ನು ಸನ್ಮಾನಿಸಲಾಯಿತು.
