ಸುದ್ದಿ9ಬಂಟ್ವಾಳ; ಪಹಣಿಪತ್ರದಲ್ಲಿರುವ ಚಿಕ್ಕ ಚಿಕ್ಕ ದೋಷಗಳನ್ನು ತಿದ್ದುಪಡಿ ಮಾಡಿಸಿಕೊಳ್ಳಲು ಜನಸಾಮಾನ್ಯರು ತ್ರಾಸ ಪಟ್ಟುಕೊಳ್ಳುತ್ತಾರೆ, ಇದನ್ನು ನಿವಾರಿಸಲು ಸಕರ್ಾರ ಕಂದಾಯ ಅದಾಲತ್ ಅನ್ನು ಆಯೋಜಿಸುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದು ಮಂಗಳೂರು ಉಪವಿಭಾಗದ ಸಹಾಯಕ ಆಯುಕ್ತ ಅಶೋಕ್ ಹೇಳಿದ್ದಾರೆ. ಕಂದಾಯ ಇಲಾಖಾ ವತಿಯಿಂದ ಬಿ.ಸಿ.ರೋಡಿನ ರಂಗೋಲಿ ಸಭಾಂಗಣದಲ್ಲಿ ಗುರುವಾರ ನಡೆದ ಬಿ.ಮೂಡ, ತುಂಬೆ ಹಾಗೂ ಕಳ್ಳಿಗೆ ಗ್ರಾಮ ವ್ಯಾಪ್ತಿಯ ಕಂದಾಯ ಅದಾಲತ್ ಅನ್ನು ಉದ್ದೇಶಿಸಿ ಅವರು ಮಾತನಾಡಿದರು. ಸಕರ್ಾರ ಮತ್ತು ಕಂದಾಯ ಇಲಾಖೆ ಜನರ ಮಧ್ಯೆ ಇದೆ ಎನ್ನುವುದಕ್ಕೆ ಕಂದಾಯ ಅದಾಲತ್ ನಂತಹ ಕಾರ್ಯಕ್ರಮ್ರಗಳೇ ಸಾಕ್ಷಿ ಎಂದ ಅವರು, ಇದಕ್ಕೆ ಸಾರ್ವಜನಿಕರ ಸಕ್ರೀಯ ಭಾಗವಹಿಸುವಿಕೆ ಅಗತ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಂಬೆ ಗ್ರಾಮಪಂಚಾಯತ್ ಅಧ್ಯಕ್ಷ ಮಹಮ್ಮದ್ ವಳವೂರು ಅದಾಲತ್ ಅನ್ನು ಉದ್ಘಾಟಿಸಿದರು. ಜಿ.ಪಂ.ಸದಸ್ಯರಾದ ಮಮತಾ ಗಟ್ಟಿ, ಚಂದ್ರಪ್ರಕಾಶ್ ಶೆಟ್ಟಿ, ಪುರಸಭಾ ಸದಸ್ಯರಾದ ರಾಮಕೃಷ್ಣ ಆಳ್ವ, ಭಾಸ್ಕರ್ ಟೈಲರ್, ಪ್ರಭಾವತಿ, ಮಹಮ್ಮದ್ ನಂದರಬೆಟ್ಟು, ಮಹಮ್ಮದ್ ಇಕ್ಬಾಲ್ , ತುಂಬೆ ಗ್ರಾ.ಪಂ.ಸದಸ್ಯ ಪ್ರವೀಣ್, ಪುರುಷ ಸಾಲ್ಯಾನ್, ಅಕ್ರಮ ಸಕ್ರಮ ಸಮಿತಿ ಸದಸ್ಯೆ ಪ್ಲೋಸಿ ಡಿ’ಸೋಜ , ಮಾಜಿ.ಜಿ.ಪಂ.ಸದಸ್ಯ ಎಸ್.ಅಬ್ಬಾಸ್ ಮತ್ತಿತರರು ಉಪಸ್ಥಿತರಿದ್ದರು.
ಬೆರಳೆಣಿಕೆಯ ಮಂದಿ..
ಕಂದಾಯ ಇಲಾಖೆ ಆಯೋಜಿಸಿದ್ದ ಕಂದಾಯ ಅದಾಲತ್ ಮೂರು ಗ್ರಾಮಗಳ ವ್ಯಾಪ್ತಿಗೆ ಸಂಬಂಧಿಸಿದ್ದು ಎಂದು ಹೇಳಲಾಗಿತ್ತಾದರೂ ಬೆರಳೆಣಿಕೆಯಷ್ಟು ಮಂದಿ ಮಾತ್ರ ಕಂದಾಯ ಅದಾಲತ್ ನ ಪ್ರಯೋಜನ ಪಡೆದುಕೊಂಡರು. ಈ ಬಗ್ಗೆ ತಮ್ಮ ಭಾಷಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ಜಿ.ಪಂ.ಸದಸ್ಯೆ , ಸಾರ್ವಜನಿಕರು ಭಾಗವಹಿಸಬೇಕಾದ ಇಂತಹಾ ಅದಾಲತ್ ಗಳ ಬಗ್ಗೆ ಗ್ರಾಮಮಟ್ಟದಲ್ಲಿ ಪ್ರಚಾರ ನಡೆಯಬೇಕು ಆಗ ಮಾತ್ರ ಸಕರ್ಾರದ ಆಶಯಗಳು ಈಡೇರುತ್ತದೆ ಎಂದರು.

05

By Suddi9

Leave a Reply

Your email address will not be published. Required fields are marked *