ಸುದ್ದಿ9ಬಂಟ್ವಾಳ: ಮಂಚಿ ಬೊಲ್ಪು ಕಲಾ ತಂಡವು ಬೊಲ್ಪು ಕ್ರೀಯೇಶನ್ಸ್ ಬ್ಯಾನರ್ನಡಿ ನಿಮರ್ಾಣವಾದ ಪಾಪದಾ ಪಿರಾವುದಾರವಾಹಿಯು ದೂರದರ್ಶನ ಚಂದನ ವಾಹಿನಿಯಲ್ಲಿ ಅಕ್ಟೋಬರ್ 18ರಿಂದ ಪ್ರತಿಶನಿವಾರ ರಾತ್ರಿ ಗಂಟೆ 8.00ರಿಂದ 8.30ವರೆಗೆ ಪ್ರಸಾರವಾಗಲಿದೆ ಎಂದು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಾಹಿತಿ, ದಾರವಾಹಿ ನಿಧರ್ೇಶಕ ಕೊರಗಪ್ಪ ಶಿಂಗಾರಕೋಡಿ ತಿಳಿಸಿದ್ದಾರೆ.
ಬಂಟ್ವಾಳ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸಂಜೆ ದಾರವಾಹಿಯ ಸ್ಟಿಕ್ಕರ್ ಬಿಡುಗಡೆಗೊಳಿಸಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ದಾರಾವಾಹಿಯು ಈಗಾಗಲೇ ಸುಮಾರು 10 ಕಂತುಗಳಷ್ಟು ಚಿತ್ರಿಕರಣವನ್ನು ಪೂತರ್ಿಗೊಳಿಸಿದ್ದು, ಮುಂದಿನ ಚಿತ್ರೀಕರಣಕ್ಕೆ ಕಲಾತಂಡವು ಸಜ್ಜಾಗಿದೆ. ಪೆನರ್ೆ, ನೂಜಿಬೈಲು, ಮಂಚಿ, ಕೋಕಾಳ, ಮೊದಲಾದ ಪ್ರದೇಶಗಳಲ್ಲಿ ಮುಂದಿನ ಹಂತದ ಚಿತ್ರೀಕರಣ ನಡೆಯಲಿದೆ ಎಂದರು.

ತುಳು ನಾಡಿನ ಗತಿಸಿರುವ ಇತಿಹಾಸದ ಧಾಮರ್ಿಕ, ಸಾಂಸ್ಕೃತಿಕ, ಕೃಷಿ ಸಂಪತ್ತು ಹಾಗೂ ಸಮಾನತೆಯ ಪ್ರತೀಕಗಳನ್ನು ಈ ಧಾರಾವಾಹಿಯಲ್ಲಿ ಬಿಂಬಿಸಲಾಗಿದೆ ಎಂದ ಅವರು ಸುಮಾರು 50 ವರ್ಷಗಳ ಹಿಂದೆ ತುಳುನಾಡಿನಲ್ಲಿದ್ದಂತ ಜಮೀನ್ದಾರೀಕೆ ಕಾಲದಲ್ಲಿನ, ದಬ್ಬಾಳಿಕೆ, ಶೋಷಣೆ ಸರ್ವಧರ್ಮದ ಜನರು ಕೂಡಿ ಬಾಳಿ ಮೆರೆದ ಸಮಾನತೆಯ ಜೊತೆಗೆ ಅವಿದ್ಯಾವಂತರೇ ಹೆಚ್ಚಾಗಿದ್ದ ಕಾಲದಲ್ಲಿ ತಮ್ಮ ಮಾನವೀತೆಯ ಬದುಕಿಗಾಗಿ ನಡೆಸಿದ ಹೋರಾಟ ಕಂಡ ಯಶಸ್ವಿ ಬದುಕು ತುಳುನಾಡಿನ ಮಣ್ಣಿನೊಂದಿಗೆ ತಾವಿಟ್ಟುಕೊಂಡಂತಹ ಅವಿನಾಭಾವ ಸಂಬಂಧಗಳೆಲ್ಲವೂ ಇದರಲ್ಲಿ ರೂಪುಗೊಂಡಿದೆ ಎಂದರು.
ಉಳುಮೆ, ಕೊಯ್ಲು ಮೊದಲಾದ ಸಂದರ್ಭಗಳಲ್ಲಿ ತಮ್ಮ ದ್ಯನಂದಿನ ದಣಿವನ್ನು ನಿವಾರಿಸಲು ತಾವೇ ಕಟ್ಟಿಕೊಂಡ, ಓಬೇಲೆ, ಶೋಭಾನೆ ಹಾಡುಗಳು, ಪಾಡ್ದನಗಳು ಈ ಧಾರಾವಾಹಿಯಲ್ಲಿ ಚಿತ್ರಿಕರಿಸಲಾಗಿದೆ. ತಾವು ದುಡಿದು ಉಣ್ಣುತ್ತಿದ್ದ ಕೃಷಿ ಭೂಮಿಯನ್ನು ದೇವರೆಂದು ಪೂಜಿಸಿ ಅದಕ್ಕಾಗಿಯೇ ರೂಪಿಸಿಕೊಂಡ ನಾಗ ತಂಬಿಲ ಭೂಮಿಗೆ ಹಾಲೆರೆಯುವುದು, ಬಾಳೆ ಹಾಕುವುದು, ಜೊತೆಗೆ ತಮ್ಮ ಭೂಮಿಯಲ್ಲೇ ಬೆಳೆದಿರುವಂತಹ ಹಲವು ಬಗೆ ಸಮಿತ್ತುಗಳಿಂದ, ಪೃಕೃತಿ ಜೊತೆ ಅಡಕವಾಗಿರುವ ಔಷಧ ಗುಣವುಳ್ಳ ವಸ್ತುಗಳನ್ನು ಶೇಖರಿಸಿ ಮನೆತುಂಬಿಸುವುದು. ಮಳೆಗಾಲದಲ್ಲಿ ಜನರ ಭಯವನ್ನು ಹೋಗಲಾಡಿಸಲು ಆಟಿಕೆಳೆಂಜವನ್ನು ಸೃಷ್ಟಿಸಿ ಮನೆ ಮನೆ ತಿರುಗಿ ತಮ್ಮ ಹೊಟ್ಟೆಯ ಹಸಿವನ್ನು ನೀಗಿಸುತ್ತಿದ್ದ ಆ ಸಂಧರ್ಭಗಳು ಸುಗ್ಗಿಯಲ್ಲಿ ಬರುವ ಮಾದಿರ, ತುಳುನಾಡಿನ ದ್ಯವಾರಾಧನೆ- ಸಂಪ್ರದಾಯ ಆಚರಣೆಗಳನ್ನು ಮುಂದಿನ ಯುಪೀಳಿಗೆಗೆ ಪರಿಚಯಿಸುವ ಒಂದು ಪ್ರಯತ್ನ ಈ ಧಾರಾವಾಹಿಯಲ್ಲಿದೆ ಎಂದು ಕೊರಗಪ್ಪ ಶಿಂಗಾರಕೋಡಿ ವಿವರಿಸಿದರು
ಕೊರಗಪ್ಪ ಶಿಂಗಾರಕೋಡಿ ರಚಿಸಿ, ಕತೆ, ಸಂಭಾಷಣೆ ಬರೆದು ನಿದರ್ೇಶನ ನೀಡಿದ್ದಾರೆ. ವಿಶ್ವನಾಥ ದೋಣಿಗದ್ದೆ ಸಹ ನಿದರ್ೇಶಕರಾಗಿದ್ದಾರೆ. ದಿವಾಕರ ಬಾಳೆಪುಣಿ ಛಾಯಾಗ್ರಹಣ ಮಾಡುತ್ತಿದ್ದಾರೆ. ಧಾರಾವಾಹಿಯ ನೈಜತೆಗಾಗಿ ಎಲ್ಲಾ ಹೆಚ್ಚಾಗಿ ಗ್ರಾಮೀಣ ಕಲಾವಿದರನ್ನೆ ಆಯ್ಕೆ ಮಾಡಲಾಗಿದೆ. ಅಶೋಕ ಶೆಟ್ಟಿ ಸರಪಾಡಿ, ದೇವದಾಸ ಅಡಪ ಇರಾ, ಪುಷ್ಪರಾಜ ಕುಕ್ಕಾಜೆ, ಪಧ್ಮನಾಭ ಸಾಲ್ಯಾನ್, ರಾಜೇಶ್ ಬಾಳಿಕೆ, ಕಡಬ ದಿನೇಶ್ ರೈ, ವಿಕ್ಟರ್ ಪಾಯಸ್, ಯಶೋಧ ಬಿ,ಶೆಟ್ಟಿ, ಪ್ರತೀಮಾ ಜಿ. ಅಂಚನ್, ಆನಂದ, ಉದಯ ಕುಮಾರ್ ಲಾಯಿಲ, ಜಯಂತ್ ನೇರಂಬೋಳು, ಮೋಹನದಾಸ ಕೊಟ್ಟಾರಿ, ಸುನಿಲ ಜಾರಂದ ಗುಡ್ಡೆ, ವಿಜಯ ಮಾರಿಪಳ್ಳ, ಮೀನಾಕ್ಷಿ ಕಡೆಶ್ವಾಲ್ಯ, ಶಶಿಧರ್ ಕೆ. ವಾಸಪ್ಪ, ವಿಶ್ವನಾಥ ಕಲ್ಲಡ್ಕ, ನೋಣಯ್ಯ, ಹೊನ್ನಯ್ಯ ಅಮೀನ್, ಶಿವಶಂಕರ್ ಮಂಚಿ, ನಾರಾಯಣ ಪೆನರ್ೆ, ಯಾಧವ ಕುರಿಯಾಡಿ, ಮಾ| ಪ್ರಜ್ವಲ್,ಕು| ಹಷರ್ಿತಾ ಮೊದಲಾದವರು ನಟಿಸಿದ್ದಾರೆ ಎಂದು ಸುದ್ದಿಗೊಷ್ಠಿಯಲ್ಲಿ ಹಾಜರಿದ್ದ ಬೊಲ್ಪು ಕ್ರಿಯೇಶನ್ಸ್ ಅಧ್ಯಕ್ಷ ಅಶೋಕ್ ತಿಳಿಸಿದರು.

ಬೊಲ್ಪು ಕಲಾ ತಂಡಕ್ಕೆ 15ರ ಸಂಭ್ರಮ
ಸುಮಾರು 15 ವರ್ಷಗಳ ಹಿಂದೆ ಬಂಟ್ವಾಳ ತಾಲೂಕಿನ ಮಂಚಿ-ಕೊಳ್ನಾಡು ಎಂಬ ಗ್ರಾಮೀಣ ಪ್ರದೇಶದಲ್ಲಿ ಜಿಲ್ಲೆಯ ಎಲ್ಲಾ ಗ್ರಾಮೀಣ ಪ್ರದೇಶಗಳ ಕಲಾವಿದರನ್ನು ಒಗ್ಗೂಡಿಸಿ ಪ್ರಾರಂಭಿಸಿದ ಕಲಾ ಸಂಸ್ಥೆ ಬೊಲ್ಪು ಕಲಾ ತಂಡವು ಇದೀಗ 15ರ ಹರೆಯದ ಸಂಭ್ರಮದಲ್ಲಿದೆ.
ತುಳುನಾಡಿನಲ್ಲಿ ನಶಿಸುತ್ತಿರುವ ಕಂಗೀಲು, ಆಟಿಕಳೆಂಜ, ಮಾದಿರ, ಸುಗ್ಗಿಕುಣಿತ ಮೊದಲಾದ ಕಲಾ ಪ್ರಾಕಾರಗಳನ್ನು ಪ್ರದಶರ್ಿಸುತ್ತಾ ರಾಜ್ಯದ ಮೂಲೆ ಮೂಲೆಯಲ್ಲಿ ಸಂಚರಿಸಿ ತುಳುನಾಡಿನ ಕೀತರ್ಿ ಪತಾಕೆಯನ್ನು ಹಾರಿಸಿ, ಇದೀಗ ತುಳುನಾಡಿನ ಗ್ರಾಮೀಣ ಬದುಕಿನ ಸೊಗಡನ್ನು ಪ್ರತಿಬಿಂಬಿಸುವ ಧಾರಾವಾಹಿಯನ್ನು ನಿಮರ್ಿಸುತ್ತಿದೆ ಎಂದು ಕೆ, ಗೋಪಾಲ. ಕಾಡುಮಠ ತಿಳಿಸಿದ್ದರು.
ಪತ್ರಿಕಾಗೋಷ್ಟಿಯಲ್ಲಿ ಬೊಲ್ಪು ಕ್ರಿಯೇಶನ್ಸ್ ಕಾರ್ಯದಶರ್ಿ ಪದ್ಮನಾಭ ಸಾಲ್ಯಾನ್, ಮಹಾದೇವ ಬ್ಯಾಂಕಿನ ಅಧ್ಯಕ್ಷ ದೇವದಾಸ ಅಡಪ, ರಾಜೇಶ್ ಆಳ್ವ ಬಾಳಿಕೆ, ನಾರಾಯಣ ಪೆನರ್ೆ, ಶಶಿಧರ, ಚಂದ್ರಶೇಖರ ಬಿ, ಮೊದಲಾದವರು ಉಪಸ್ಥಿತರಿದ್ದರು.

RAM_9528

IMG_20140603_155605 (1)

IMG_20140610_160655

IMG_20140612_120648

IMG_20140613_131118

By Suddi9

Leave a Reply

Your email address will not be published. Required fields are marked *