ಸುದ್ದಿ9ಮಂಗಳೂರು: ಸೆಂಟ್ರಲ್ ಮಾಕರ್ೆಟ್ ಬಳಿಯ ಮೈದಾನ ಉತ್ತರ ರಸ್ತೆಯ ಸಿಟಿ ಟವರ್ನ ಒಂದನೇ ಮಹಡಿಯಲ್ಲಿ ಮಯೂರು ಎಂಟರ್ ಪ್ರೈಸಸ್ ಎಂಬ ಅಂಗಡಿ ಹೊಂದಿದ್ದ ಹೋಲ್ ಸೇಲ್ ಮೊಬೈಲ್ ಡಿಲರ್ಗಳಾದ ಬಾಬುಲಾಲ್ ಹಾಗೂ ಅಜರ್ುನ್ ಎಂಬವರು ಮೊಬೈಲ್ ಮತ್ತು ಮೊಬೈಲ್ ಪರಿಕರಗಳ ಡಿಸ್ಟಿಬ್ಯೂಟರ್ಗಳಿಗೆ 40 ಲಕ್ಷ ರೂ. ವಂಚಿಸಿ ನಾಪತ್ತೆಯಾಗಿದ್ದಾರೆ ಎಂಬ ಬಗ್ಗೆ ಬಂದರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಶ್ರೀ ಎಂಟರ್ ಪ್ರೈಸಸ್ನ ರಂಜಿತ್, ಎಸ್ಟ್ರಾ ಲೈಫ್ ಸೊಲ್ಯೂಷನ್ ಸಂಸ್ಥೆಯ ರವಿ ಕೆ ಬಿ, ಪದ್ಮಾ ಎಂಟರ್ ಪ್ರೈಸಸ್ನ ರಾಕೇಶ್ ಶೆಟ್ಟಿ, ಆವರ್ೀಸ್ ಎಜೇನ್ಸಿಯ ರಿಚಾರ್ಡ್ ರಸ್ಕಿನ್ನಾ ಮತ್ತು ಗ್ರೀನ್ಸ್ ಎಂಟರ್ ಪ್ರೈಸಸ್ ಜೀವನ್ ಹಾಗೂ ತನಗೆ ವಂಚಿಸಿದ್ದಾರೆ ಎಂಂಬುದಾಗಿ ಮೈಕ್ರೋ ಮ್ಯಾಕ್ಸ್ ಮತ್ತು ಜಿಯೋನಿ ಎಂಬ ಸಂಸ್ಥೆಯ ಮೊಬೈಲ್ ಡಿಸ್ಟಿಬ್ಯೂಟರ್ ಆಗಿರುವ ಗುರುದತ್ತ ಕಾಮತ್ ಎಂಬವರು ದೂರಿನಲ್ಲಿ ತಿಳಿಸಿದ್ದಾರೆ.
ಆರೋಪಿಗಳಿಗೆ ಮೊಬೈಲ್ ಸೆಟ್ಗಳನ್ನು ಸಪ್ಲೈ ಮಾಡಿದ್ದು, ಅವರು ಎರಡು ತಿಂಗಳು ಕಂಪೆನಿಯ ನಿಯಮದಂತೆ ನಗದು ಹಣ ನೀಡಿ ವ್ಯವಹಾರ ನಡೆಸಿದ್ದರು ಬಳಿಕ ಕಳೆದ ಎರಡು ತಿಂಗಳಿನಿಂದ ಸಪ್ಲೈ ಮಾಡಿದ ಮೊಬೈಲ್ನ ಹಣವನ್ನು ಚೆಕ್ ರೂಪದಲ್ಲಿ ನೀಡಿದ್ದರು. ಆರೋಪಿಗಳು ನೀಡಿದ ಎಲ್ಲಾ ಚೆಕ್ ಗಳು ಬೌನ್ಸ್ ಆಗಿವೆ. ತನಗೆ 2,38,000 ರೂ ಹಣ ಬರಬೇಕಿದೆ. ಆರೋಪಿಗಳು ಅಂಗಡಿ ಬಂದ್ ಮಾಡಿ ತಮ್ಮ 9986860277 ಮತುತಿ 9986860488 ನೇ ನಂಬ್ರದ ಮೊಬೈಲ್ ಸ್ವಿಚ್ಛ ಆಫ್ ಮಾಡಿದ್ದಾರೆ ಎಂದು ದೂರಿನಲ್ಲಿ ಗುರುದತ್ ತಿಳಿಸಿದ್ದಾರೆ.
