ಮಂಗಳೂರು: ಕಳೆದ ಜುಲೈ 21 ರಂದು ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾಗಿ ಹೊರಗೆ ಬಂದು ಬಳಿಕ ನಾಪತ್ತೆಯಾ ಗಿರುವ ಭೂಗತ ಪಾತಕಿ ರಶೀದ್ ಮಲ್ಬಾರಿ ನೇಪಾಲ ದಲ್ಲಿ ತಲೆಮರೆಸಿಕೊಂ ಡಿದ್ದಾನೆಯೇ? ಇಂತಹ ಸಾಧ್ಯತೆಗಳ ಲೆಕ್ಕಾಚಾರ ಪೆÇಲೀಸ್ ಇಲಾಖೆಯಲ್ಲಿ ನಡೆಯುತ್ತಿದೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ, ಉಡುಪಿ ಜಿಲ್ಲೆಯ ಹೆಜಮಾಡಿಯ ಕನ್ನಂಗಾರ್ ಮೂಲದ 47 ವರ್ಷದ ರಶೀದ್ ಮಲ್ಬಾರಿಗೆ ಬೆಂಗಳೂರಿನ ಜೈಲಿನಲ್ಲಿಡಲಾಗಿತ್ತು. ಅಲ್ಲಿಂದಲೇ ಜಾಮೀನು ಪಡೆದು ಬಿಡಿಗಡೆಯಾದ ಆತ ನಾಪತ್ತೆಯಾಗಿದ್ದಾನೆ.

RashidMalbari
ಜು. 26ರಂದು ಪ್ರಕರಣವೊಂದಕ್ಕೆ ಸಂಬಂಧಿಸಿ ಮಂಗಳೂರು ನ್ಯಾಯಾಲಯಕ್ಕೆ ಹಾಜರಾಗಬೇಕಾಗಿದ್ದ ಆತ ಹಾಜರಾಗದೆ ತಪ್ಪಿಸಿಕೊಂಡಿದ್ದ. ಈ ಬಗ್ಗೆ ನ್ಯಾಯಾಲಯ ವಾರಂಟ್ ಹೊರಡಿಸಿದೆ.
ರಶೀದ್ ಮಲ್ಬಾರಿಯ ಬಂಧನಕ್ಕೆ ತೀವ್ರ ಕಾರ್ಯಾಚರಣೆ ನಡೆಸುತ್ತಿರುವ ಗುಪ್ತಚರ ಇಲಾಖೆ ಸೇರಿದಂತೆ ಪೆÇಲೀಸ್ ದಳ ಮಾಹಿತಿ ಕಲೆಹಾಕುವ ಕಾರ್ಯದಲ್ಲಿ ನಿರತವಾಗಿವೆ. ವಿದೇಶಕ್ಕೆ ಪರಾರಿಯಾಗಿರುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಆತನ ಬಂಧನಕ್ಕೆ ಇಂಟರ್‍ಪೆÇೀಲ್ ನೆರವು ಕೋರುವಂತೆ ಮಂಗಳೂರು ಪೆÇಲೀಸರು ಸಿಬಿಐಗೆ ಪತ್ರ ಬರೆದಿದ್ದಾರೆ ಎನ್ನಲಾಗಿದೆ.
ಜಾಮೀನು ಪಡೆದು ಬಿಡುಗಡೆಯಾದ ಬಳಿಕ ಉಡುಪಿ ಜಿಲ್ಲೆಯ ಪಡುಕಾಪುವಿನ ವಿಚ್ಛೇದಿತ ಮಹಿಳೆಯೋರ್ವಳನ್ನು ಆತ ವಿವಾಹವಾಗಿದ್ದ. ಜೈಲ್‍ನಲ್ಲಿರುವಾಗಲೇ ನಕಲಿ ಪಾಸ್‍ಪೆÇೀರ್ಟ್ ಮಾಡಿಸಿಕೊಂಡಿದ್ದು, ಇದನ್ನು ಬಳಸಿಕೊಂಡು ಆಕೆಯ ಜೊತೆ ವಿದೇಶಕ್ಕೆ ಪರಾರಿಯಾಗಿರುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿ ಬರುತ್ತಿವೆ.

By suddi9

Leave a Reply

Your email address will not be published. Required fields are marked *