ಬಂಟ್ವಾಳ: ತಾಲೂಕಿನ ಕಳ್ಳಿಗೆ ಗ್ರಾಮದಲ್ಲಿ ಶಾಸಕರ  ಅನುದಾನದಲ್ಲಿ ಸುಮಾರು 1.30 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಆರು ರಸ್ತೆಗಳನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ರವಿವಾರ ಲೋಕಾರ್ಪಣೆಗೊಳಿಸಿದರು.

IMG-20201122-WA0057ಈ ಸಂದರ್ಭದಲ್ಲಿ ಸ್ಥಳೀಯರು ಬೆಂಜನಪದವು ಪ್ರದೇಶಕ್ಕೆ ಕೆಎಸ್ಸಾರ್ಟಿಸಿ ಬಸ್ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಿದರು.ಬಳಿಕ ಮಾತನಾಡಿದ ಶಾಸಕರು, ಗ್ರಾಮಸ್ಥರಿಂದ ಬಂದಿರುವ ಬಹುತೇಕ  ರಸ್ತೆ ಕಾಮಗಾರಿಗಳನ್ನು ಪೂರೈಸಲಾಗಿದ್ದು,  ಮುಂದಿನ ದಿನಗಳಲ್ಲಿ ಜನರ ಬೇಡಿಕೆಯನ್ನು ಹಂತ,ಹಂತವಾಗಿ  ನೆರವೇರಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.

IMG-20201122-WA0056

IMG-20201122-WA0059
ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ನಿರ್ದೇಶಕ ಅರುಣ್ ರೋಶನ್ ಡಿ’ಸೋಜ, ಪಂಚಾಯತ್ ಮಾಜಿ ಸದಸ್ಯರಾದ ಪುಷ್ಪರಾಜ್ ಶೆಟ್ಟಿ ಬ್ರಹ್ಮರಕೂಟ್ಲು, ವಿಮಲಾ ಬೆಂಜನಪದವು, ಯಶೋಧಾ ಜಾರಂದಗುಡ್ಡೆ, ರೇವತಿ ಮಾಡಂಗೆ, ಜೀವನ್ ಡಿ’ಸೋಜಾ, ನೆತ್ರಕೆರೆ ಬೂತ್ ಸಮಿತಿ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ, ಪ್ರಧಾನ ಕಾರ್ಯದರ್ಶಿ ಸಂಜೀವ ಬೆಳ್ಚಡ, ಪಚ್ಚಿನಡ್ಕ ಬೂತ್ ಸಮಿತಿ ಅಧ್ಯಕ್ಷ ಗ್ಲ್ಯಾಂಡ್ಸನ್ ಡಿಸೋಜ, ಪ್ರಧಾನ ಕಾರ್ಯದರ್ಶಿ ರಾಹುಲ್ ರೈ, ಬ್ರಹ್ಮರಕೂಟ್ಲು ಬೂತ್ ಸಮಿತಿ ಅಧ್ಯಕ್ಷ ಯೋಗೀಶ್ ದರಿಬಾಗಿಲು, ಪ್ರಧಾನ ಕಾರ್ಯದರ್ಶಿ ಸಂದೇಶ್ ದರಿಬಾಗಿಲು, ಪ್ರಮುಖರಾದ ಸಂಜೀವ ಬೆಳ್ಚಡ ದರಿಬಾಗಿಲು, ಭೋಜ ದರಿಬಾಗಿಲು, ಪ್ರತಾಪ್ ಶೆಟ್ಟಿ, ದಾಮೋದರ ನೆತ್ರಕೆರೆ, ಮನೋಜ್ ವಳವೂರು, ಮನೋಹರ ವಳವೂರು, ದೇವಿಪ್ರಸಾದ್ ಎಂ. ದೇವಂದಬೆಟ್ಟು, ಲಕ್ಷ್ಮಣ್ ಕಂಜತ್ತೂರು, ಸತೀಶ್ ಮಾಡಂಗೆ, ಯೋಗೀಶ್ ವಿ.ಕೆ ದರಿಬಾಗಿಲು, ಉಮೇಶ್ ಬೆದ್ರಾಡಿ, ರಘುನಾಥ್ ನೆತ್ರಕೆರೆ, ಸುಧಾಕರ ನೆತ್ರಕೆರೆ, ರಮೇಶ್ ನಾಯ್ಕ್ ಬೆಂಜನಪದವು,  ಸುರೇಶ್ ಶೆಟ್ಟಿ ಕಂಜತ್ತೂರು, ಯೋಗೀಶ್ ರಾವ್ ಕನಪಾಡಿ, ಭೋಜ ಸಪಲ್ಯ ಗುಂಡಿಬೆಟ್ಟು, ರಾಕೇಶ್ ಗುಂಡಿಬೆಟ್ಟು, ದಿನಕರ ಚಂದ್ರಿಗೆ, ಸುನೀಲ್ ಚಂದ್ರಿಗೆ, ಅಕೇಶ್ ಬೆಂಜನಪದವು, ಸಂದೀಪ್ ಬೀಡು, ವರುಣ್ ಬೆಂಜನಪದವು, ಪ್ರವೀಣ್ ಬೆಂಜನಪದವು, ಅಬೂಬಕ್ಕರ್ ಜಾರಂದಗುಡ್ಡೆ, ಭವ್ಯ ರೂಪೇಶ್ ಜಾರಂದಗುಡ್ಡೆ, ಶಾರದಾ ಕೋಟೇಶ್ ಬೆಂಜನಪದವು, ರೇಶ್ಮಾ ಬೆಂಜನಪದವು, ಅಶ್ವಿನಿ ಬೆಂಜನಪದವು, ನಮೃತಾ ಬೆಂಜನಪದವು ಮೊದಲಾದವರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *