ಬಂಟ್ವಾಳ : ವಿದ್ಯಾರ್ಥಿಗಳು ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳಸಿಕೊಂಡು  ಪ್ರಸ್ತುತ ವಿಚಾರಗಳನ್ನು ಅರಿತುಕೊಳ್ಳಬೇಕು,ಆ ಮೂಲಕವಾಗಿ ತಮ್ಮ ಜ್ಞಾನ ಭಂಡಾರವನ್ನು ಹೆಚ್ಚಿಸಿಕೊಳ್ಳಬೇಕು  ಎಂದು  ಕನ್ನಡ ಉಪನ್ಯಾಸಕ ಚೇತನ್ ಮುಂಡಾಜೆ ಹೇಳಿದರು. ರವಿವಾರ ಬಿ.ಸಿ.ರೋಡಿನ ರಾಜರಾಜೇಶ್ವರಿ ಕಾಂಪ್ಲೆಕ್ಸ್‌ನಲ್ಲಿರುವ ಯುನಿಕ್ ಎಜುಕೇರ್ ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗಾಗಿ ನಡೆದ ಅಧ್ಯಯನ ತಂತ್ರಗಳು ಮತ್ತು ಸ್ಪರ್ಧಾತ್ಮಕ ಪರೀಕ್ಷೆಯ ಪೂರ್ವ ತಯಾರಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿ ವಿದ್ಯಾರ್ಥಿಗಳು ನಿರ್ದಿಷ್ಟ ಗುರಿಯನ್ನಿರಿಸಿಕೊಂಡು ಅದನ್ನು ತಲುಪುವಲ್ಲಿ  ಗಮನವನ್ನು ಕೇಂದ್ರೀಕರಿಸಿಕೊಳ್ಳಬೇಕು ಎಂದು  ತಿಳಿಸಿದರು.22YA karyagara
ಬಂಟ್ವಾಳ ಲಯನ್ಸ್ ಕ್ಲಬ್ ಕೃಷ್ಣಶ್ಯಾಮ್ ಕಾರ್ಯಾಗಾವನ್ನು  ಉದ್ಘಾಟನೆಗೈದು ಶುಭ ಹಾರೈಸಿದರು. ಯುನಿಕ್ ಎಜುಕೇರ್‌ನ ಲಕ್ಷ್ಮಣ ಅಗ್ರಬೈಲ್ ಸ್ವಾಗತಿಸಿ, ಕವಿತಾ ಯಾದವ್ ವಂದಿಸಿದರು. ಉಪನ್ಯಾಸಕಿ ಭಾರತಿ ವಸಂತ ಕುಮಾರ್ ಅಣ್ಣಳಿಕೆ ನಿರೂಪಿಸಿದರು. ವೈಷ್ಣವಿ ಮತ್ತು ಧನ್ಯಾ ಪ್ರಾರ್ಥಿಸಿದರು. ನ್ಯಾಯವಾದಿ ಯಶೋಧ, ಯಾದವ ಅಗ್ರಬೈಲ್, ದೇವದಾಸ್, ಡಾ. ಬಾಲಕೃಷ್ಣ ಕುಮಾರ್ ಸಹಕರಿಸಿದರು.

By suddi9

Leave a Reply

Your email address will not be published. Required fields are marked *