ಕಾರ್ಕಳ :ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಅಂಬಲಪಾಡಿ ಇದರ ಪ್ರವರ್ತಕ ಜಿ. ಶಂಕರ್ ಅವರು ಮಣಿಪಾಲ ಸಿಗ್ಮಾ ಹೆಲ್ತ್ ಇನ್ಸೂರೆನ್ಸ್ ಕಂಪನಿ ಹಾಗೂ ಮಾಹೇ ಮಣಿಪಾಲ ಸಹಯೋಗದಲ್ಲಿ ಹೊಸದಾಗಿ ಜಿ. ಶಂಕರ್ ಅರೋಗ್ಯ ಸುರಕ್ಷಾ ಕಾರ್ಡ್ ಯೋಜನೆಯನ್ನು ಆರಂಭಿಸಿದ್ದಾರೆ.
ಇದರ ನೋಂದಣಿ ಕಾರ್ಯಕ್ರಮವು ಕಡ್ತಲದ ಬ್ಯಾಂಕ್ ವಠಾರದಲ್ಲಿ ನಡೆಯಿತು.ಸುಮಾರು 60 ಕುಟುಂಬಗಳು ಇದರ ಸದುಪಯೋಗವನ್ನು ಪಡೆದುಕೊಂಡರು.ಜಾತಿ, ಮತ ಬೇಧವಿಲ್ಲದೆ ಬಡ ಜನರ ಸ್ವಾಸ್ತ್ಯಕ್ಕಾಗಿ ಡಾ.ಜಿ. ಶಂಕರ್ ಅವರು ಹಮ್ಮಿಕೊಂಡ ಈ ಅರೋಗ್ಯ ವಿಮೆ ಯೋಜನೆ ಇದಾಗಿದ್ದು, ಮಣಿಪಾಲ ಸಮೂಹ ಆಸ್ಪತ್ರೆಗಳಿಗೆ ಮಾತ್ರ ಸೀಮಿತವಾಗಿದೆ.
