ಮಂಗಳೂರು: ಸ್ವಾತಂತ್ರಾನಂತರ ಸರಿ ಸುಮಾರು ೭೦ ರ್ಷಗಳಿಂದ, ದಕ್ಷಿಣಭಾರತದ ರಾಜ್ಯಗಳಲ್ಲಿ ವಿವಿಧ ರಾಷ್ಟ್ರೀಯ ಪಕ್ಷಗಳು,ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಬಂದರೂ ಕೊನೆಗೆ ಸವಿತಾ ಸಮಾಜವನ್ನು ಗುರುತಿಸಿ,ಸವಿತಾ ಸಮಾಜದವರಾದ ದಿವಂಗತ ಶ್ರೀ ಅಶೋಕ್ ಗಸ್ತಿಯವರನ್ನು ಸಂಸತ್ ಮೆಟ್ಟಿಲೇರುವಂತೆ ಮಾಡಿದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘ. ಇದು ದಿ.ಅಶೋಕ ಗಸ್ತಿಯವರ ವರ್ಚಸ್ಸಿನಿಂದ ಸಮಾಜಕ್ಕೆ ಸಂದ ಗೌರವ ಎಂದು ದ.ಕ.ಜಿಲ್ಲಾ ಸವಿತಾ ಸಮಾಜ ಜಿಲ್ಲಾಧ್ಯಕ್ಷ ಆನಂದ ಭಂಡಾರಿ ಹೊಸಬೆಟ್ಟು ನೆನಪಿಸಿದರು.
ಮಾಜಿ ರಾಜ್ಯಸಭಾ ಸದಸ್ಯರು ದಿ| ಆಶೋಕ್ ಗಸ್ತಿ ಯವರ 56ನೇ ಜನ್ಮದಿನಾಚರಣೆ ಹಾಗೂ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಒಬ್ಬ ಶಿಸ್ತಿನ ಸ್ವಯಂಸೇವಕನಾಗಿ ವಿದ್ಯಾರ್ಥಿ,ದೆಸೆಯಿಂದ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ನಾಯಕರಾಗಿ,ಸರಳ ಸಜ್ಜನ ವಕೀಲರಾಗಿ ಹಾಗೂ ಭಾರತೀಯ ಜನತಾ ಪಕ್ಷದ ನಿಷ್ಠಾವಂತ ಕರ್ಯರ್ತರಾಗಿ,ರಾಯಚೂರು ಜಿಲ್ಲಾ ನಿಕಟಪೂರ್ವ ಜಿಲ್ಲಾ ಅಧ್ಯಕ್ಷರಾಗಿ ಶ್ರೀ ಅಶೋಕ್ ಗಸ್ತಿಯವರ ಸೇವೆ ಅವಿಸ್ಮರಣೀಯ. ಪಕ್ಷದ ಸಂಘಟನೆ ಹಾಗೂ ಉತ್ತರ ಕರ್ನಾಟಕದಲ್ಲಿ ಭಾ.ಜ. ಪ ಪಕ್ಷವನ್ನು ಬೆಳೆಸಲು ಶ್ರೀ ಅಶೋಕ್ ಗಸ್ತಿಯವರು ತಮ್ಮ ಕುಟುಂಬವನ್ನೂ,ಸ್ವ ಹಿತಾಸಕ್ತಿಯನ್ನೂ ಲೆಕ್ಕಿಸದೆ ಶ್ರಮಿಸಿರುವುದು ಎಲ್ಲರಿಗೂ ತಿಳಿದ ವಿಷಯ. ಪಕ್ಷಸಂಘಟನೆಯನ್ನು ,ಹಿಂದುಳಿದ ಪಂಗಡದ ಹಿತವನ್ನೆ ಸಂಕಲ್ಪವಾಗಿ ಮಾಡಿಕೊಂಡಿದ್ದ ಶ್ರೀ ಅಶೋಕ್ ಗಸ್ತಿಜಿ ಯವರು ಕೆಲವೇ ದಿನಗಳಲ್ಲಿ ಕೋವಿಡ್ ಗೆ ಬಲಿಯಾದದ್ದು ನಮ್ಮೆಲ್ಲರ ದುರ್ದೈವ ಹಾಗೂ ಸವಿತಾ ಸಮಾಜಕ್ಕೆ ತುಂಬಲಾರದ ನಷ್ಟಕೂಡ ಎಂದರು.
ದಿ| ಆಶೋಕ್ ಗಸ್ತಿ ಯವರ 56ನೇ ಜನ್ಮದಿನಾಚರಣೆ ಹಾಗೂ ರಕ್ತದಾನ ಶಿಬಿರದ ಉದ್ಘಾಟನೆಯು ನ.14 ರಂದು ಶನಿವಾರ ಮಂಗಳಾದೇವಿ ಶ್ರೀ ದೇವಿ ನಿಲಯದಲ್ಲಿ ನಡೆಯಿತು.
ದಕ್ಷಿಣ ಕನ್ನಡ ಜಿಲ್ಲಾ ಸವಿತಾ ಸಮಾಜ, ಮಂಗಳೂರು ಮತ್ತು ಮಂಗಳೂರು ತಾಲೂಕು ಸವಿತಾ ಸಮಾಜ ಸಹಯೋಗದೊಂದಿಗೆ ನೆರವೇರಿತು. ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ಸವಿತಾ ಸಮಾಜ ಜಿಲ್ಲಾಧ್ಯಕ್ಷ ಆನಂದ ಭಂಡಾರಿ ಹೊಸಬೆಟ್ಟು ವಹಿಸಿದ್ದರು.
ದ. ಕ. ಜಿಲ್ಲಾ ಸವಿತಾ ಸಮಾಜದ ಜಿಲ್ಲಾ ಪ್ರತಿನಿಧಿ ವಸಂತ ಎಂ. ಬೆಳ್ಳೂರು , ಮಂಗಳೂರು ತಾಲೂಕು ಸವಿತಾ ಸಮಾಜದ ಅಧ್ಯಕ್ಷ ಸಂಜಯ್ ಮಹಾಲೆ, ದ. ಕ. ಜಿಲ್ಲಾ ಸವಿತಾ ಸಮಾಜದ ಮಾಜಿ ಜಿಲ್ಲಾಧ್ಯಕ್ಷ ದಿನೇಶ ಎಲ್ ಬಂಗೇರ ಹಾಗೂ ಕೆ.ಎಂ.ಸಿ ಆಸ್ಪತ್ರೆ ತಾಂತ್ರಿಕ ಮೇಲ್ವಿಚಾಕರಾದ ಶ್ರೀಮತಿ ಶಿಜಿ ಥಾಮಸ್ ಮತ್ತು ತಾಲೂಕು ಸಮಿತಿಯ ಎಲ್ಲಾ ವಲಯ ಸಮಿತಿಗಳ ಸದಸ್ಯರು ಉಪಸ್ಥಿತರಿದ್ದರು. ಸಮಾಜದ ಹೆಚ್ಚಿನ ಸದಸ್ಯರು ರಕ್ತದಾನ ಶಿಬಿರದಲ್ಲಿ ಭಾಗವಹಿಸಿದರು. ನಿಧನದಿಂದ ತೆರವಾಗಿರುವ
ಪಕ್ಷಕ್ಕಾಗಿ ಮುಡುಪಾಗಿಟ್ಟಿದ್ದ ಶ್ರೀ ಅಶೋಕ್ ಗಸ್ತಿಜಿ ನಿಧನದಿಂದ ತೆರವಾಗಿರುವ ರಾಜ್ಯಸಭಾ ಶ್ರೀಮತಿ ಸುಮಾ ಗಸ್ತಿಯವರನ್ನು ನೇಮಕ ಮಾಡಿ ಅವರ ಕುಟುಂಬಕ್ಕೆ ಹಾಗೂ ಸವಿತಾ ಸಮಾಜಕ್ಕೆ ನ್ಯಾಯ ದೊರಕಿಸಿಕೊಡಬೇಕೆಂದು ಸಮಸ್ತ ಸವಿತಾ ಸಮಾಜದ ಆಶಯವಾಗಿದೆ. ವಸಂತ ಎಂ. ಬೆಳ್ಳೂರು ಸ್ವಾಗತಿಸಿ, ದಿನೇಶ ಎಲ್ ಬಂಗೇರರು ವಂದಿಸಿದರು.
