ಬಂಟ್ವಾಳ: ಬಂಟ್ವಾಳ ತಾ. ತೆಂಕ ಕಜೆಕಾರು ಗ್ರಾಮದ ಕಜೆಕಾರು ಶ್ರೀ ಮಹದೇವ ದೇವೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಅವರು ನೀಡಲಾದ ಆರ್ಥಿಕ ಸಹಾಯದ ಚೆಕ್ ವಿತರಣೆ ಕಾರ್ಯಕ್ರಮ ನ.೫ರಂದು ದೇವಸ್ಥಾನದ ವಠಾರದಲ್ಲಿ ನಡೆಯಿತು.
ದೇವಸ್ಥಾನದ ಹೊರ ಗೋಪುರ, ಸಭಾ ಮಂಟಪ, ಅಡುಗೆ ಕೋಣೆ, ಅರ್ಚಕರ ವಿಶ್ರಾಂತಿ ಕೊಠಡಿ, ಮಿನಿ ಹಾಲ್ ಕಚೇರಿ ಗೋದಾಮು ಕಟ್ಟಡ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಶ್ರೀ ಕ್ಷೇ.ಧ.ದ ವತಿಯಿಂದ ನೀಡಲಾದ ೩.ಲಕ್ಷ ರೂ. ಮೊತ್ತದ ಡಿ.ಡಿ.ಯನ್ನು ಶ್ರೀ ಕ್ಷೇ.ಧ.ಗ್ರಾ.ಯೋಜನೆ ಸಮುದಾಯ ಮತ್ತು ಅಭಿವೃದ್ಧಿ ವಿಭಾಗ ಪ್ರಾದೇಶಿಕ ನಿರ್ದೇಶಕ ಶ್ರೀಹರಿ ಅವರು ದೇವಸ್ಥಾನದ ಆಡಳಿತ ಮೊಕ್ತೇಸರ ಯಶೋಧರ ಪೂಜಾರಿ ಮತ್ತು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಣಶೇಖರ ಕೊಡಂಗೆ ಅವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ನಿವೃತ್ತಿಗೊಳ್ಳುತ್ತಿರುವ ಶ್ರೀಹರಿ ಅವರನ್ನು ದೇಗುಲದ ವತಿಯಿಂದ ಸಮ್ಮಾನಿಸಲಾಯಿತು.ಶ್ರೀ ಕ್ಷೇ.ಧ.ಗ್ರಾ.ಯೋಜನೆ ದ.ಕ. ನಿರ್ದೇಶಕ ಸತೀಶ್ ಶೆಟ್ಟಿ, ಸಮುದಾಯ ಅಭಿವೃದ್ಧಿ ಯೋಜನಾಽಕಾರಿ ಪುಷ್ಪರಾಜ್, ಬಂಟ್ವಾಳ ಯೋಜನಾಽಕಾರಿ ಜಯಾನಂದ, ವಗ್ಗ ವಲಯ ಮೇಲ್ವಿಚಾರಕಿ ಭವಾನಿ, ಕಜೆಕಾರು ಸೇವಾಪ್ರತಿನಿಧಿ ಸುಧಾ ಎಚ್.ರೈ, ವಗ್ಗ ವಲಯ ಒಕ್ಕೂಟ ಅಧ್ಯಕ್ಷ ಮಾಧವ ಪಟ್ರಾಡಿ, ಕರ್ಲ ಒಕ್ಕೂಟ ಅಧ್ಯಕ್ಷ ಸುಂದರ ಸಾಲ್ಯಾನ್, ದೇವಸ್ಥಾಣ ಪ್ರ. ಅರ್ಚಕ ನಾರಾಯಣ ಅಡಿಗ , ಮಹೇಶ್ ಅಡಿಗ, ಜಿರ್ಣೋದ್ದಾರ ಸಮಿತಿ ಉಪಾಧ್ಯಕ್ಷ ಪ್ರವೀಣ ಅಬುರ, ಭಜನ ಮಂಡಳಿ ಅಧ್ಯಕ್ಷ ವಸಂತ ಮಡಿವಾಳ, ಯೋಜನೆ ಶುದ್ಧ ಗಂಗಾ ನೀರಿನ ಘಟಕ ನಿರ್ದೇಶಕ ಲಕ್ಷ÷್ಮಣ ಎಂ., ಜೀರ್ಣೋದ್ಧಾರ ಸಮಿತಿ ಸದಸ್ಯರಾದ ಕೇಶವ ಪ್ರಭು, ರೋಹಿನಾಥ ಕಂರ್ಬಡ್ಕ, ವಾಸು ದೇವಾಡಿಗ, ದಿನೇಶ್ ಜೆಂಕ್ಯಾರು, ಸತೀಶ್ ಕಜೆಕಾರು, ಬಾಬು ಪೂಜಾರಿ ನೀರಾರಿ ಮತ್ತಿತರರು ಉಪಸ್ಥಿತರಿದ್ದರು.
