ಕೈಕಂಬ : ಇಂದಿಗೆ ಸರಿ ಸುಮಾರು ನಾಲ್ಕು ತಿಂಗಳ ಹಿಂದೆ ಗುಡ್ಡೆ ಕುಸಿತ ಉಂಟಾಗಿದ್ದ ಪ್ರದೇಶಕ್ಕೆ ಅ. 31ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ ವಿ ಹಾಗೂ ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಭೇಟಿ ನೀಡಿ, ಸಂತ್ರಸ್ತರ ಅಹವಾಲು ಸ್ವೀಕರಿಸಿ ಪರಿಹಾರ ಮತ್ತು ವಸತಿ ನಿರ್ಮಾಣ ಮಾರ್ಗೋಪಾಯಗಳ ಬಗ್ಗೆ ವಿಸ್ತ್ರತ  ಚರ್ಚಿಸಿದರು.31vp dc bheti

ಗುಡ್ಡ ಕುಸಿತದ ಬಳಿಕ 71 ಕುಟುಂಬ ಸಂತ್ರಸ್ತರಾಗಿದ್ದು, ಬೇರೆಡೆ ತಾತ್ಕಾಲಿಕ ಮನೆ ಮಾಡಿಕೊಂಡಿರುವವರಿಗೆ ಶೀಘ್ರ ಪರಿಹಾರ ಸಿಗಬೇಕು. ಈ ನಿಟ್ಟಿನಲ್ಲಿ ನಿಜವಾದ ನೊಂದವವರ ಪಟ್ಟಿ ತಯಾರಿಸಿ, ನನಗೆ ಕಳುಹಿಸಿ. ಆ ಪಟ್ಟಿಯಲ್ಲಿ ಅಕೌಂಟೇಬಿಲಿಟಿ ಇರಬೇಕು. ಸಂತ್ರಸ್ತರಿಗೆ ರಾಜೀವ್ ಗಾಂಧಿ ಹೌಸಿಂಗ್ ಬೋರ್ಡಿನಿಂದ ಸಿಗುವ ನೆರವಿಗೆ ಪ್ರಯತ್ನಿಸುವೆ. ಸರ್ಕಾರದ ಮಟ್ಟದಲ್ಲಿ ಮಾನ್ಯ ಶಾಸಕರಾದ ಡಾ. ಭರತ್ ಶೆಟ್ಟಿ ಪ್ರಯತ್ನಿಸಲಿದ್ದಾರೆ ಎಂದರು.

`ಗುಡ್ಡ ಕಡಿದು ಮನೆ ಬೇಡ’ :

ಎಲ್ಲೇ ಆಗಲಿ ಗುಡ್ಡ-ಬೆಟ್ಟ ಪ್ರದೇಶಗಳಲ್ಲಿ ತೋಡು ಮಾಡಿಕೊಂಡು ವಸತಿ ವ್ಯವಸ್ಥೆಗೆ ಮುಂದಾಗುವುದು ಅವೈಜ್ಞಾನಿಕವಾಗುತ್ತದೆ ಮತ್ತು ಅದು ಅಪಾಯಕಾರಿ. ಭವಿಷ್ಯದಲ್ಲಿ ಇಂತಹ ದುರ್ಘಟನೆ ಸಂಭವಿಸಿದರೆ ಪಂಚಾಯತ್ ಅಧಿಕಾರಿಗಳು ಜವಾಬ್ದಾರರಾಗುತ್ತಾರೆ. ಆದ್ದರಿಂದ ಭವಿಷ್ಯದ ಪರಿಣಾಮಗಳೇನು ಎಂಬುದುರ ಬಗ್ಗೆ ಮುಂದಾಲೋಚನೆಯಿಂದ ಕೆಲಸ ಮಾಡಬೇಕು ಎಂದು ಗುರುಪುರ ಪಿಡಿಒಗೆ ಡೀಸಿ ಸೂಚಿಸಿದರು.

ಗಂಜಿಮಠ ಗ್ರಾಪಂನ ಮೊಗರಿನಲ್ಲಿ ಜಾಗ :

ಗುರುಪುರ ಮಠದಗುಡ್ಡೆ ಸೈಟಿನ ಸಂತ್ರಸ್ತರಿಗೆ ಗಂಜಿಮಠ ಗ್ರಾಪಂನ ಮೊಗರು ಗ್ರಾಮದಲ್ಲಿ 1.5 ಎಕ್ರೆ ಜಾಗ ಗುರುತಿಸಲಾಗಿದ್ದು, ಆ ಬಗ್ಗೆ ಕಾನೂನಾತ್ಮಕ ಪ್ರಕ್ರಿಯೆ ಆರಂಭಗೊಂಡಿದೆ. ಅದೇ ಗ್ರಾಮದ ಮತ್ತೊಂದೆಡೆ 2.5 ಎಕ್ರೆ ಜಾಗ ಗುರುತಿಸಲಾಗಿದೆ. ಗುರುಪುರ ಗ್ರಾಪಂ ವ್ಯಾಪ್ತಿಯಲ್ಲಿ ಸೂಕ್ತ ಜಾಗ ಇಲ್ಲ ಎಂದು ಮಂಗಳೂರು ತಹಶೀಲ್ದಾರ್ ಗುರುಪ್ರಸಾದ್ ಹೇಳಿದರು.

ಸಂತ್ರಸ್ತರಿಗೆ ಡೀಸಿ ಅವರು ಮಾರ್ಮಿಕ ಉತ್ತರ :

ವರ್ಷಗಳಿಂದ ಒಂದೆಡೆ ಇದ್ದು, ಕಾರಣಾಂತರಗಳಿಂದ ಏಕಾ ಏಕಿಯಾಗಿ ಬೇರೆಡೆಗೆ ಸ್ಥಳಾಂತರಗೊಳ್ಳಲು ಕಷ್ಟವಾಗುತ್ತದೆ ಎಂಬುದು ಸತ್ಯ. ಆದರೆ ಈಗಾಗಲೇ ಕಷ್ಟ ಅನುಭವಿಸಿರುವ ನೀವು ಮತ್ತೆ ಇಲ್ಲೇ ಮನೆ ಕಟ್ಟಿಕೊಂಡು ಕಷ್ಟ ಅನುಭವಿಸುತ್ತೀರಾ ? ಆದ್ದರಿಂದ ಇಲ್ಲಿ ಭವಿಷ್ಯದಲ್ಲಿ ಶಾಸ್ವತ ಮನೆ ನಿರ್ಮಾಣ ಸಾಧ್ಯತೆ ಕಡಿಮೆ ಇದೆ. ಬೇರೆಡೆಗೆ ಹೋಗುವುದು ಅನಿವಾರ್ಯವಾಗಬಹುದು. ರೆಡ್ ಝೋನ್, ಯೆಲ್ಲೋ ಎಂಬುದು ಸದ್ಯದ ಪರಿಹಾರಕ್ಕೆ ಮಾಡಲಾದ ವ್ಯವಸ್ಥೆ. ಆದರೆ ಮಳೆಗಾಲದಲ್ಲಿ ನಮ್ಮ ನಿರೀಕ್ಷೆಗಳೆಲ್ಲ ಹುಸಿಯಾಗಬಹುದು ಎಂದು ಜಿಲ್ಲಾಧಿಕಾರಿ ಮಾರ್ಮಿಕವಾಗಿ ನುಡಿದರು.

ಬ್ಯಾಂಕ್ ಸಾಲ ಪಡೆದುಕೊಂಡು ಮನೆ ಕಟ್ಟಿದವರು ಬೇರೆಡೆಗೆ ಸ್ಥಳಾಂತರಗೊಂಡಾಗ ಸಾಲ ಮತ್ತು ಸಾಲದ ಮೇಲಿನ ಬಡ್ಡಿ ಸಮಸ್ಯೆ ಉಂಟಾಗುತ್ತದೆ ಎಂದು ಸಂತ್ರಸ್ತರೊಬ್ಬರು ಹೇಳಿದಾಗ, ಆ ಬಗ್ಗೆ ಸಂಬಂಧಿತರೊಂದಿಗೆ ಮಾತುಕತೆ ನಡೆಸಿ ಪರಿಹಾರಕ್ಕೆ ಪ್ರಯತ್ನಿಸುತ್ತೇವೆ. ಸರ್ಕಾರಿ ಮಟ್ಟದಲ್ಲಿ ಶಾಸಕರು ಕೆಲಸ ಮಾಡಲಿದ್ದಾರೆ ಎಂದರು.

ಸಭೆಯಲ್ಲಿ ಸಂತ್ರಸ್ತರೊಂದಿಗೆ ಜಿಪಂ ಸದಸ್ಯ ಯು ಪಿ ಇಬ್ರಾಹಿಂ, ತಾಪಂ ಸದಸ್ಯ ಸಚಿನ್ ಅಡಪ, ಸಹಾಯಕ ಆಯುಕ್ತ ರವಿಚಂದ್ರ ನಾಯಕ್, ಉಪತಹಶೀಲ್ದಾರ್ ಶಿವಪ್ರಸಾದ್, ಕಂದಾಯ ನಿರೀಕ್ಷಕ ಆಸೀಫ್, ವಿಎ, ಪಿಡಿಒ ಅಬೂಬಕ್ಕರ್, ಬಿಜೆಪಿ ಮುಖಂಡರಾದ ರಾಜೇಶ್ ಸುವರ್ಣ, ಶ್ರೀಕರ ಶೆಟ್ಟಿ, ಸೋಮಯ್ಯ, ನಳಿನಿ ಶೆಟ್ಟಿ, ಸೇಸಮ್ಮ, ಜಲಜಾ, ಜಯಲಕ್ಷ್ಮೀ, ದಾವೂದ್, ಹಸನ್ ಬಾವ ಕಂದಾಯ ವಿಭಾಗದ ಸಿಬ್ಬಂದಿ ವರ್ಗ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *