ಬಂಟ್ವಾಳ: ಇಲ್ಲಿನ ನರಿಕೊಂಬು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಪ್ಪುಗುಡ್ಡೆ ಎಂಬಲ್ಲಿ ರೂ 8ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಉಪ್ಪುಗುಡ್ಡೆ-ದೆಂಜಿಲಪಾಡಿ ಗ್ರಾಮೀಣ ರಸ್ತೆ ಕಾಮಗಾರಿಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ಬುಧವಾರ ಉದ್ಘಾಟಿಸಿದರು. 
ಸ್ಥಳೀಯ ತಾಲ್ಲೂಕು ಪಂಚಾಯಿತಿ ಸದಸ್ಯೆ ಗಾಯತ್ರಿ ರವೀಂದ್ರ ಸಪಲ್ಯ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಚಂದ್ರಾವತಿ ರತ್ನಾಕರ ನಾಯ್ಕ, ವಿಶ್ವನಾಥ ಪೂಜಾರಿ, ರವೀಂದ್ರ ಸಪಲ್ಯ, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುಧೀಪ್ ಕುಮಾರ್ ಶೆಟ್ಟಿ, ಪ್ರಮುಖರಾದ ಮಾಧವ ಪೂಜಾರಿ ಕರ್ಬೆಟ್ಟು, ಅಬೂಬಕ್ಕರ್ ಉಪ್ಪುಗುಡ್ಡೆ, ಅರುಣ್ ಶೆಟ್ಟಿ. ಪಿ.ಎಸ್. ಅಬ್ದುಲ್ ಹಮೀದ್, ಹರೀಶ್ ಕೆ., ಸುಂದರ ಸಾಲ್ಯಾನ್, ಅಲ್ಬರ್ಟ್ ಮಿನೇಜಸ್, ದಿವಾಕರ ಪೂಜಾರಿ ಅಬೆರೊಟ್ಟು, ರಮೇಶ್ ಪೂಜಾರಿ ಬೋರುಗುಡ್ಡೆ, ಹಮ್ಮದ್ ಉಪ್ಪುಗುಡ್ಡೆ, ಹಮೀದ್ ಉಪ್ಪುಗುಡ್ಡೆ, ಅಬೂಬಕ್ಕರ್ ಉಪ್ಪುಗುಡ್ಡೆ, ಪಿ.ಎಸ್. ಅಬ್ದುಲ್ ಲತೀಫ್, ಆನಂದ ಸಾಲ್ಯಾನ್, ನಾರಾಯಣ ಸಿ. ಪೆನರ್ೆ, ವಿಶ್ವಾಸ್ ಕುಮಾರ್, ತುಕರಾಮ ನಾಯ್ಕ, ಅನಿಲ್, ರಾಜ್ಕುಮಾರ್, ಗಂಗಾಧರ , ಶಶಿಕಲ, ಶೇಖರ ಪೂಜಾರಿ ಅಂತರ ಮತ್ತಿತರರು ಇದ್ದರು.
