ಬಂಟ್ವಾಳ:ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಆವರಣದಲ್ಲಿ ೨೦೨೦-೨೧ನೇ ಸಾಲಿನ ಯಾಂತ್ರೀಕರಣ ಯೋಜನೆಯಡಿ ಸಹಾಯಧನದಲ್ಲಿ ನೀಡಲಾದ ಮಿನಿ ಟ್ಯಾಕ್ಟರ್ ಹಾಗೂ ಪವರ್ ಟಿಲ್ಲರನ್ನು ಫಲಾನುಭವಿಗಳಿಗೆ ವಿತರಿಸಿದರು.

ಇರ್ವತ್ತೂರು ಗ್ರಾಮ ನಿವಾಸಿ ನಿರಂಜನ್ಕುಮಾರ್ ಅವರಿಗೆ ಮಿನಿ ಟ್ಯಾಕ್ಟರ್ ಹಾಗೂ ಬಿಳಿಯೂರು ಗ್ರಾಮ ನಿವಾಸಿ ವೆಂಕಪ್ಪ ನಾಯ್ಕ ಅವರಿಗೆ ಪವರ್ ಟಿಲ್ಲರ್ ವಿತರಿಸಲಾಯಿತು. ಇದರಲ್ಲಿ ಟ್ಯಾಕ್ಟರ್ಗೆ ೭೫ ಸಾವಿರ ರೂ. ಹಾಗೂ ಟಿಲ್ಲರ್ಗೆ ೧ ಲಕ್ಷ ರೂ.ಸರಕಾರದ ಸಹಾಯಧನ ನೀಡಲಾಗಿದೆ.ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ರವೀಂದ್ರ ಕಂಬಳಿ, ಸಹಾಯಕ ಕೃಷಿ ನಿರ್ದೇಶಕ ನಾರಾಯಣ ಶೆಟ್ಟಿ ಹಾಗೂ ಸಿಬಂದಿ ಉಪಸ್ಥಿತರಿದ್ದರು
