ಕೈಕಂಬ : ರಾಜಕೀಯ ಕಾರಣಗಳಿಂದಾಗಿ ಈ ಭಾಗದಲ್ಲಿ ಬಾಕಿ ಉಳಿದಿರುವ ಕೆಲವು ಮಹತ್ವದ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡುತ್ತಿದ್ದೇನೆ. ಅಭಿವೃದ್ಧಿ ದೆಸೆಯಲ್ಲಿ ಎಲ್ಲರಿಗೂ ಮೂಲಭೂತ ಸೌಕರ್ಯ ಲಭಿಸಬೇಕೆಂದುಕೊಂಡಿದ್ದೇನೆ. ಇದು ನಮ್ಮ ಪಕ್ಷದ ಧೋರಣೆಯೂ ಆಗಿದೆ. ಕಂದಾವರ ಪಂಚಾಯತ್ ವ್ಯಾಪ್ತಿಯಲ್ಲಿ ಅಂದಾಜು ವೆಚ್ಚ ಏಳು ಕೋಟಿ ರೂ ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ಹೇಳಿದರು.
ಅ. ೨೬ ಕಂದಾವರ ಗ್ರಾಪಂ ವ್ಯಾಪ್ತಿಯ ಗುರುಪುರ ಕೈಕಂಬದ ಧೂಮವತಿ ದೈವಸ್ಥಾನ ದ್ವಾರದಿಂದ ಮುಂದುವರಿದ ಸುಮಾರು ೬೦೦ ಮೀಟರ್ ಉದ್ದದ, ೩೫ ಲಕ್ಷ ರೂ ವೆಚ್ಚದಲ್ಲಿ ಕಾಂಕ್ರೀಟೀಕರಣಗೊಳ್ಳಲಿರುವ ಲೋಕೋಪಯೋಗಿ ರಸ್ತೆ ಅಭಿವೃದ್ಧಿಗೆ ಗುದ್ದಲಿ ಪೂಜೆ ನಡೆಸಿ ಮಾತನಾಡಿದರು.ಬಳಿಕ ಕೈಕಂಬ ಮಾರುಕಟ್ಟೆ ಪ್ರದೇಶದಲ್ಲಿ ನಿರ್ಮಿಸಲಾಗುವ ನೂತನ ರಿಕ್ಷಾ ಸ್ಟ್ಯೇಂಡ್ಗೆ ಶಾಸಕರು ಗುದ್ದಲಿಪೂಜೆ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಗುರುಪುರ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸೋಹನ್ ಅತಿಕಾರಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಸುವರ್ಣ, ಬಿಜೆಪಿ ಪ್ರಮುಖರಾದ ವಿನೋದ್ ಮಾಡ, ಶೋಧನ್ ಆದ್ಯಪಾಡಿ, ಅಮರನಾಥ ಶೆಟ್ಟಿ ಆದ್ಯಪಾಡಿ, ಪ್ರವೀಣ್ ಶೆಟ್ಟಿ ಕಂದಾವರ, ಸೋಮಯ್ಯ ಗುರುಪುರ, ಹರೀಶ್ ಶೆಟ್ಟಿ ಏತಮೊಗರುಗುತ್ತು, ಮನಪಾ ಕಾರ್ಪೊರೇಟರ್ ಲೋಹಿತ್ ಅಮೀನ್ ಹಾಗೂ ಮನಪಾ ಸ್ಥಾಯಿ ಸಮಿತಿ ಅಧ್ಯಕ್ಷ ಶರತ್ ಕುಮಾರ್, ಶ್ರೀಕರ ಶೆಟ್ಟಿ, ಮಂಡಲ ಉಪಾಧ್ಯಕ್ಷೆ ಅಮೃತ್ ಜೋಯ್ಸ್ ಡಿ’ಸೋಜ, ಹರೀಶ್ ಮಟ್ಟಿ, ಸುಧಾಕರ ಕೊಳಂಬೆ, ಥಾಮಸ್ ಸಿಕ್ವೇರ, ನವೀನ್ ಕಂದಾವರ, ಗಂಗಾಧರ ಹಾಗೂ ರಿಕ್ಷಾ ಯೂನಿಯನ್ ಕೈಕಂಬ ಘಟಕದ ಅಧ್ಯಕ್ಷ ಹರೀಶ್ ನಡಿಕಲ, ಉಪಾಧ್ಯಕ್ಷ ವರುಣಾಕ್ಷ, ಕಾರ್ಯದರ್ಶಿ ಏಕನಾಥ ಮಳಲಿ, ಖಜಾಂಚಿ ಸುನಿಲ್ ಸುಂಕದಕಟ್ಟೆ, ಕಾರ್ಯಕರ್ತರು ಮತ್ತಿತರರು ಉಪಸ್ಥಿತರಿದ್ದರು.

