ಬಂಟ್ವಾಳ: ತಾಲೂಕಿನ ಕರಿಯಂಗಳ ಗ್ರಾಮದ ಪೊಳಲಿ ಪಡ್ಡಿಯಾಪುನಿಂದ ಅಮ್ಮುಂಜೆ ಗ್ರಾಮದ ಕಡಪಕರಿಯವನ್ನು ಸಂಪರ್ಕಿಸುವ ಸುಮಾರು 40 ಲಕ್ಷ ರೂ.ವೆಚ್ಚದ ಸೇತುವೆಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ ಅವರು ಶನಿವಾರ ಶಿಲಾನ್ಯಾಸ ನೆರವೇರಿಸಲಾಯಿತು. ಇದರೊಂದಿಗೆ ಈ ಭಾಗದ ಸುಮಾರು 30 ಹಿಂದು ಕುಟುಂಬಗಳ ಬಹುಕಾಲದ ಕನಸು ನನಸಾಗಿದ್ದು, ಮಳೆಗಾಲದಲ್ಲಿ ದ್ವೀಪ ರಾಷ್ಟ್ರದಲ್ಲಿ ಬದುಕಿದ ಅನುಭವಕ್ಕೆ ಮುಕ್ತಿ ನೀಡಿದಂತಾಗಿದೆ. 
ತಾಲೂಕು ಪಂಚಾಯತ್ ಸದಸ್ಯ ಯಶವಂತ ಪೊಳಲಿ, ಅಮ್ಮುಂಜೆ ಗ್ರಾಮ ಪಂಚಾಯಿತ್ ನ ಮಾಜಿ ಉಪಾಧ್ಯಕ್ಷ ವಾಮನ ಆಚಾರ್ಯ, ಬಂಟ್ವಾಳ ಕ್ಷೇತ್ರ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ರೊನಾಲ್ಡ್ ಡಿಸೋಜ, ಬಂಟ್ವಾಳ ಕ್ಷೇತ್ರ ಯುವ ಮೋರ್ಚಾ ಉಪಾಧ್ಯಕ್ಷರಾದ ಕಾರ್ತಿಕ್ ಬಲ್ಲಾಳ್, ಜನಾರ್ದನ ಬಾರಿಂಜೆ, ರಾಧಾಕೃಷ್ಣ ತಂತ್ರಿ ಪೊಳಲಿ, ಲೋಕೇಶ್ ಭರಣಿ, ನಿಶಾಂತ್ ಕುಮಾರ್ ಅಮ್ಮುಂಜೆ, ಕಿಶೋರ್ ಪಲ್ಲಿಪಾಡಿ, ಸುದರ್ಶನ್ ಭಂಡಾರಿ ಅಮ್ಮುಂಜೆ, ನವೀನ್ ಶೆಟ್ಟಿ ಮಂಟಮೆ ಹಾಗೂ ಸ್ಥಳೀಯ ನಾಗರಿಕರು ಉಪಸ್ಥಿತರಿದ್ದರು.
