ಬಂಟ್ವಾಳ: ಮಂಗಳೂರು ರಥಬೀದಿಯ ಡಾ. ಪಿ.ದಯಾನಂದ ಪೈ, ಪಿ.ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೋವರ್ಸ್ ಮತ್ತು ರೇಂಜರ್ಸ್ ಘಟಕದ ಮೂಲಕ  ಮಂಗಳೂರು ಇಸ್ಕಾನ್ ನ ಅಕ್ಷಯ ಪಾತ್ರೆ ಕೊಡುಗೆಯಾಗಿ ನೀಡಲಾದ ಆಹಾರ ಕಿಟ್ ನ್ನು  120 ಮಂದಿಗೆ ವಿತರಿಸಲಾಯಿತು.ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮದ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮವನ್ನುಅಕ್ಷಯ ಪಾತ್ರೆಯ ದ.ಕ. ಉಡುಪಿ ಕೋವಿಡ್  ರಿಲೀಫ್ ನ ಸಂಯೋಜಕ ಹಾಗೂ ಇಸ್ಕಾನ್ ದೇವಸ್ಥಾನದ ಕಾರ್ಯದರ್ಶಿ ಸನಂದನ ದಾಸ  ಉದ್ಘಾಟಿಸಿ ಮಾತನಾಡಿ, ಆಹಾರ ಎನ್ನುವುದುದೇವರು ಕೊಟ್ಟ ಕೊಡುಗೆ. ದೇವರ ಪ್ರಸಾದ ಹಂಚುವ ಕಾರ್ಯವನ್ನು ಇಸ್ಕಾನ್ ಮಾಡುತ್ತಿದೆ ಎಂದರು.IMG-20201024-WA0016

ಇಸ್ಕಾನ್ ಅಕ್ಷಯಪಾತ್ರೆ ಸಂಯೋಜಕ ಸಂತೋಷ್, ಅಖಿಲ ಕರ್ನಾಟಕ ಬ್ರಾಹ್ಮಣ ಅರ್ಚಕರ ಪರಿಷತ್ತಿನ ಜಿಲ್ಲಾಧ್ಯಕ್ಷ ವೇದಮೂರ್ತಿ ಕರ್ಬೆಟ್ಟು ಕೃಷ್ಣರಾಜ ಭಟ್ , ಸ್ಥಳೀಯ ವೈದ್ಯ ಡಾ. ಸುಬ್ರಹ್ಮಣ್ಯ ಟಿ ಉಪಸ್ಥಿತರಿದ್ದರು. ಮಂಗಳೂರು ರಥಬೀದಿಯ ಡಾ. ಪಿ.ದಯಾನಂದ ಪೈ, ಪಿ.ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಿನ್ಸಿಪಾಲ್ ಪ್ರೊ. ರಾಜಶೇಖರ ಹೆಬ್ಬಾರ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿತಾ ಭಟ್ ಪ್ರಾರ್ಥಿಸಿದರು. ಕಾಲೇಜಿನ ರೋವರ್ಸ್ ಘಟಕದ ಸಂಯೋಜಕ  ಪ್ರೊ. ಪುರುಷೋತ್ತಮ ಭಟ್ ಕಾರ್ಯಕ್ರಮ ನಿರೂಪಿಸಿದರು. ರೇಂಜರ್ಸ್ ಘಟಕ ಸಂಯೋಜಕಿ ಡಾ. ಶೈಲಾರಾಣಿ ವಂದಿಸಿದರು.

By suddi9

Leave a Reply

Your email address will not be published. Required fields are marked *