ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ವಿಟ್ಲ ಇದರ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮಡಿಯಲ್ಲಿ ಕಲ್ಲಡ್ಕ ವಲಯದ ವತಿಯಿಂದ ಗೋಳ್ತಮಜಲ್ ಗ್ರಾಮ ಪಂಚಾಯತ್ ನ ಕಲ್ಲಡ್ಕ ಮಾರುಕಟ್ಟೆ ಆವರಣದಲ್ಲಿ ಕೊರೋನಾ ಜಾಗೃತಿ ಮತ್ತು ದುಶ್ಚಟ ಮುಕ್ತ ಸಮಾಜದ ಬಗ್ಗೆ ಬೀದಿ ನಾಟಕ ಕಾರ್ಯಕ್ರಮವನ್ನು ಶುೃತಿ ಬಳಗ ದಾವಣಗೆರೆ ಇವರು ನಡೆಸಿಕೊಟ್ಟರು .  ಮಾಜಿ ಶಾಸಕರಾದ ರುಕ್ಮಯ್ಯ ಪೂಜಾರಿ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.IMG-20201023-WA0085
ಕಾರ್ಯಕ್ರಮ ಅಧ್ಯಕ್ಷತೆಯನ್ನು   ವಲಯಾಧ್ಯಕ್ಷ ಈಶ್ವರ ನಾಯ್ಕ ವಹಿಸಿದ್ದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ವಿಟ್ಲ  ಯೋಜನಾಧಿಕಾರಿ  ಪಿ ಚೆನ್ನಪ್ಪ ಗೌಡ ರವರು ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಮಹಿಳಾ ಜ್ಞಾನವಿಕಾಸ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿ ಕೊರೋನಾ ಮುಕ್ತ ಸಮಾಜದ ನಿರ್ಮಾಣ ನಮ್ಮೆಲ್ಲರ ಜವಾಬ್ದಾರಿ ಎಂದರು. ಮಾಜಿ ಶಾಸಕರಾದ ಪದ್ಮನಾಭ ಕೊಟ್ಟಾರಿ ,ಕಿರಿಯ ಆರೋಗ್ಯ ಸಹಾಯಕಿ ರೋಹಿನಿ, ಜನಜಾಗೃತಿ ನಿಕಟಪೂರ್ವ ವಲಯಾಧ್ಯಕ್ಷರಾದ ಬಟ್ಯಪ್ಪ ಶೆಟ್ಟಿ, ಜನಜಾಗೃತಿ ಸದಸ್ಯರಾದ  ಬಿ ಕೆ ಇದಿನಬ್ಬ, ವೆಂಕಟ್ರಾಯ ಪ್ರಭು, ಒಕ್ಕೂಟ ಅಧ್ಯಕ್ಷರಾದ ಶಿವಪ್ಪ, ಎಸ್.ಪಿ ಹರೀಶ್, ವಲಯದ ಸೇವಾಪ್ರತಿನಿಧಿಗಳು ಮತ್ತು ಪದಾಧಿಕಾರಿಗಳು, ಹಾಗೂ ಜ್ಞಾನವಿಕಾಸ ಸದಸ್ಯರು ಉಪಸ್ಥಿತರಿದ್ದರು.
, ವಲಯ ಮೇಲ್ವಿಚಾರಕಿ  ಪ್ರೇಮ ಸ್ವಾಗತಿಸಿ, ಸೇವಾಪ್ರತಿನಿಧಿ ಮಾಲತಿ ವಂದಿಸಿದರು.  ಜ್ಞಾನವಿಕಾಸ ಸಮನ್ವಯಾಧಿಕಾರಿ ನಳಿನಾಕ್ಷಿ ಶೆಟ್ಟಿ  ನಿರೂಪಿಸಿದರು

By suddi9

Leave a Reply

Your email address will not be published. Required fields are marked *