ಗುರುಪುರ : ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಎಡಪದವಿನ ಕೊಂದೋಡಿ ನಿವಾಸಿ ಮಲ್ಲಿಕಾ ನಾಯ್ಕ್ ಅವರ ವೈದ್ಯಕೀಯ ನೆರವಿಗೆ ಗಂಜಿಮಠದ ಮರಾಠಿ ಸಮಾಜ ಸೇವಾ ಸಂಘ(ರಿ) 20,000 ರೂ ನೆರವು ನೀಡಿತು.gur-oct-18-shekar kadthala

ಅನಾರೋಗ್ಯ ಪೀಡಿತಳ ಮನೆಗೆ ಭೇಟಿ ನೀಡಿ ನೆರವಿನ ಚೆಕ್ ವಿತರಿಸಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಸಂಘದ ಉಪಾಧ್ಯಕ್ಷ, ಶಿಕ್ಷಕ ಪ್ರಶಸ್ತಿ ಪುರಸ್ಕøತ ಶೇಖರ ಕಡ್ತಲ, ಕಳೆದ ಕೆಲವಾರು ವರ್ಷಗಳಿಂದ ಸಂಕಷ್ಟಕ್ಕೊಳಗಾದ ಸಮಾಜ ಬಾಂಧವರಿಗೆ ವಿವಿಧ ರೀತಿಯಲ್ಲಿ ನೆರವು ನೀಡುತ್ತ ಬಂದಿದ್ದೇವೆ. ಸಮಾಜದ ಜನರ ಕಷ್ಟ-ಸಮಸ್ಯೆಗಳಿಗೆ ಸ್ಪಂದಿಸಿ, ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡುತ್ತಿದ್ದೇವೆ. ದುಡಿಮೆಯ ಒಂದು ಭಾಗ ಸಮಾಜದ ಏಳ್ಗೆಗೆ ವಿನಿಯೋಗಿಸಲಾಗುತ್ತಿದೆ ಮತ್ತು ಸಮಾಜಮುಖಿ ಕಾರ್ಯ ನಡೆಸುತ್ತಿದ್ದೇವೆ ಎಂದರು.

ಸಂಘದ ಕಾರ್ಯದರ್ಶಿ ಅಶೋಕ್ ನಾಯ್ಕ್, ಕೋಶಾಧಿಕಾರಿ ಕೇಶವ ನಾಯ್ಕ್, ಜೊತೆ ಕಾರ್ಯದರ್ಶಿ ಹರಿಶ್ಚಂದ್ರ ನಾಯ್ಕ್, ಸಂಘಟನಾ ಕಾರ್ಯದರ್ಶಿ ಸತೀಶ್ ನಾಯ್ಕ್, ಪುರಂದರ ನಾಯ್ಕ್, ನಾರಾಯಣ ನಾಯ್ಕ್ ಮತ್ತಿತರರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *