ಬಂಟ್ವಾಳ: ತಾಲೂಕಿನ ಕಾವಳಪಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮದ್ವ ಎಂಬಲ್ಲಿ ಕರಾವಳಿ ಪ್ರಾಧಿಕಾರದಿಂದ 2017-18 ಸಾಲಿನಲ್ಲಿ ಮಂಜೂರುಗೊಂಡ 10 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಕಿರು ಸೇತುವೆಯನ್ನು ಮಾಜಿ ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ ಯವರು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್,ತಾಲೂಕು ಪಂಚಾಯತ್ ಸದಸ್ಯೆ ಧನಲಕ್ಷ್ಮೀ ಬಂಗೇರ,ಬಂಟ್ವಾಳ ಬ್ಲಾಕ್ ಅಧ್ಯಕ್ಷ ಬೇಬಿ ಕುಂದರ್,ಚಂದ್ರಶೇಖರ ಕರ್ಣ ಉದಯ ಪೂಜಾರಿ, ಮಹಮ್ಮದ್ ಶರೀಫ್, ಚಂದ್ರಹಾಸ ಶೆಟ್ಟಿ,ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ಭವಾನಿ,ರಾಮಣ್ಣ ಶೆಟ್ಟಿ ಮದ್ವಕಟ್ಟೆ,ಮೊಂಟಾಗೌಡ, ಮೊಹಮ್ಮದ್ ಹನೀಫ್, ಆಶಾ ಪೂಜಾರಿ, ಪದ್ಮನಾಭ ಸಾಮಂತ್ ಮೊದಲಾದವರು ಉಪಸ್ಥಿತರಿದ್ದರು.
