ಬಂಟ್ವಾಳ : ಮೊಡಂಕಾಪು ಸ್ವಾಮಿ ವಿವೇಕಾನಂದ ಯುವಕ ಸಂಘ ಮತ್ತು ಅಯ್ಯಪ್ಪ ಮಂದಿರ (ರಿ) ಇದರ ವಾರ್ಷಿಕ ಮಹಾಸಭೆ ಕಾರ್ಯದರ್ಶಿ ಕುಶಾಲ್ ಕುಮಾರ್‌ರ ಅಧ್ಯಕ್ಷತೆಯಲ್ಲಿ ಜರಗಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಅಧ್ಯಕ್ಷರಾಗಿ ಸೋಮಶೇಖರ್ ತುಂಬೆ ಅವರು ಆಯ್ಕೆಗೊಂಡಿದ್ದಾರೆ,.
ಗೌರವಾಧ್ಯಕ್ಷರಾಗಿ ಆನಂದ ಮೊಡಂಕಾಪು, ಉಪಾಧ್ಯಕ್ಷರಾಗಿ ಸುನೀಲ್ ಕುಂದರ್, ಕಾರ್ಯದರ್ಶಿ ಚಿದಾನಂದ, ಜೊತೆ ಕಾರ್ಯದರ್ಶಿ ಸುನೀಲ್ ಕಲ್ಲಗುಡ್ಡೆ, ಕೋಶಾಧಿಕಾರಿ ಯತೀಶ್ ಕೈಕಂಬ ಆಯ್ಕೆಯಾದರು. ಪದ್ಮನಾಭ ಸ್ವಾಗತಿಸಿ, ಜಗದೀಶ್ ಅಮ್ಟಾಡಿ ವಂದಿಸಿದರು
