ಕೈಕಂಬ:ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಪಡು ಪೆರಾರ ಪಂಚಾಯತ್ ನ ಪೆರಾರ ಪಾಲ್ದಡಿಗುತ್ತು (ಪುಣ್ಕೆದಡಿ)12 ಲಕ್ಷ ರೂಪಾಯಿ ಅನುದಾನದಲ್ಲಿ ನೂತನ ಕಾಂಕ್ರೀಟಿಕರಣಗೊಂಡ ರಸ್ತೆಯನ್ನು ಗುರುವಾರ ಶಾಸಕರಾದ ಡಾ. ವೈ ಭರತ್ ಶೆಟ್ಟಿ ಲೋಕಾರ್ಪಣೆಗೊಳಿಸಿದರು.

ಶಾಸಕರ ಜೊತೆಗೆ ಜಿಲ್ಲಾ ಪಂಚಾಯತ್ ಸದಸ್ಯರಾದ ಜನಾರ್ಧನ ಗೌಡ, ಮಹಾ ಶಕ್ತಿ ಕೇಂದ್ರ ಅಧ್ಯಕ್ಷರಾದ ಪ್ರಸಾದ್ ಕುಮಾರ್, ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್, ಮಹಾಶಕ್ತಿ ಕೇಂದ್ರ ಪ್ರಭಾರಿ ಅಮರೇಶ ಬೇಕಲ್,ಮಂಗಳೂರು ನಗರ ಉತ್ತರ ಮಂಡಲದ ಮಹಿಳಾ ಮೋರ್ಚಾದ ಉಪಾಧ್ಯಕ್ಷರಾದ ಅಮಿತಾ ಶೆಟ್ಟಿ, ಮಾಜಿ ಪಂಚಾಯತ್ ಸದಸ್ಯರಾದ ಸೀತಾರಾಮ್ ಗೌಡ, ಮಂಗಳೂರು ನಗರ ಉತ್ತರ ಮಂಡಲದ ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಕಾಶಿನಾಥ್ ಕಾಮತ್, ಮೋಹನ್ ಕಬೆತ್ತಿಗುತ್ತು, ಮಂಗಳೂರು ನಗರ ಉತ್ತರ ಹಿಂದುಳಿದ ವರ್ಗದ ಸದಸ್ಯ ಜಯಂತ ಸುಂಕದಕಟ್ಟೆ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಅನುರಾಜ್ ಸುಂಕದಕಟ್ಟೆ, ಹರಿಪ್ರಸಾದ್ ಪುನ್ಕೆದಡಿ, ಶಕ್ತಿಕೇಂದ್ರ ಅಧ್ಯಕ್ಷರು, ಕಾರ್ಯದರ್ಶಿ, ಸಹಿತ ಹಿರಿಯ ಮುಖಂಡರು, ಬೂತ್ ಅಧ್ಯಕ್ಷರು, ಕಾರ್ಯಕರ್ತರು ಉಪಸ್ಥಿತರಿದ್ದರು.
