ಬಂಟ್ವಾಳ: ದ.ಕ.ಜಿಲ್ಲಾ ಶಾಮಿಯಾನ ಮಾಲಕರ ಸಂಘದ ಬಂಟ್ವಾಳ ಘಟಕದ 2019-20 ರ ವಾರ್ಷಿಕ ಮಹಾಸಭೆ ಹಾಗೂ ಆಯುಷ್ಮಾನ್  ಕಾಡ್೯  ಮತ್ತು ಇತರ ಸರಕಾರಿ ಯೋಜನೆಗಳ ನೋಂದಣಿ  ಕಾರ್ಯಕ್ರಮ ಬಿ‌.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಿತು.ಕಾರ್ಯಕ್ರಮವನ್ನು  ಶಾಮಿಯಾನ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಬಾಬು ಕೆ.ವಿಟ್ಲ ಅವರು ಉದ್ಘಾಟಿಸಿ  ಮಾತನಾಡಿ ಸಂಘಟನೆ ಬೆಳೆದರೆ ಸದಸ್ಯರು ಬೆಳೆಯುತ್ತಾರೆ , ಸಂಘಟನೆಯ ಉದ್ದೇಶಗಳನ್ನು ಕಾರ್ಯಗತಗೊಳಿಸಲು ಸಂಘಟನಾತ್ಮಕವಾಗಿ ಕೆಲಸ ಮಾಡಬೇಕು ಎಂದು  ಹೇಳಿದರು.2 (1)

 ಮುಂದಿನ ದಿನಗಳಲ್ಲಿ ಶಾಮಿಯಾನ ಮಾಲಕರ ಸಂಘಕ್ಕೆ ಸ್ವಂತ ಜಮೀನಿನಲ್ಲಿ ಕಟ್ಟಡ ನಿರ್ಮಾಣದ  ಗುರಿಯಾಗಿದೆ ಇದಕ್ಕೆ ಎಲ್ಲರ ಸಹಕಾರದ ಅಗತ್ಯವಿದೆ ಎಂದರು.ಬಂಟ್ವಾಳ ವಲಯ ಅಧ್ಯಕ್ಷ ಸುಭಾಶ್ಚಂದ್ರ ಜೈನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಘಟನೆಯ ಮೂಲಕ ಸಮಾಜದಲ್ಲಿ ಗುರುತಿಸಿಕೊಳ್ಳಿ , ಜೊತೆಗೆ ವ್ಯವಹಾರದಲ್ಲಿ ಪ್ರಮಾಣಿಕವಾಗಿದ್ದರೆ ವೃತ್ತಿಯಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು. ವೇದಿಕೆಯಲ್ಲಿ ಜಿಲ್ಲಾ ಕಾರ್ಯದರ್ಶಿ ಶಿವಪ್ರಸಾದ್ ಹೆಗ್ಡೆ, ಜಿಲ್ಲಾ ಕೋಶಾಧಿಕಾರಿ ಮುರಳೀಧರ ರಾವ್, ಮಂಗಳೂರು ಘಟಕ ದ ಅಧ್ಯಕ್ಷ ಉಮಾನಾಥ ಸುವರ್ಣ, ಮೂಡುಬಿದಿರೆ ಘಟಕದ ಅಧ್ಯಕ್ಷ ಗಣೇಶ್ ಕಾಮತ್(ಜಿ.ಕೆ), ಬೆಳ್ತಂಗಡಿ ಘಟಕದ ಅಧ್ಯಕ್ಷ ಜೆರ್ಮಿ ಡೇಸಾ ಉಪಸ್ಥಿತರಿದ್ದರು.

ಬಂಟ್ವಾಳ ಘಟಕದ ಕಾರ್ಯದರ್ಶಿ ಮ್ಯಾಕ್ಸಿಂ ಸಿಕ್ವೇರಾ ವಾರ್ಷಿಕ ವರದಿ ವಾಚಿಸಿದರು.ಬಂಟ್ವಾಳ ಘಟಕದ ಕೋಶಾಧಿಕಾರಿ ಎಂ.ಎಚ್.ಅನೀಷ್ ಕುಡ್ತಮೊಗೇರು ಲೆಕ್ಕಪತ್ರ ಮಂಡಿಸಿದರು.
ಉಪಾಧ್ಯಕ್ಷ ರತ್ನಾಕರ ರೈ ವಂದಿಸಿದರು.ಲ. ಶ್ರೀನಿವಾಸ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು

By suddi9

Leave a Reply

Your email address will not be published. Required fields are marked *