ಬಂಟ್ವಾಳ : ಮುಂಬರುವ ಗ್ರಾ.ಪಂ ಚುನಾವಣೆಯ ಹಿನ್ನೆಲೆಯಲ್ಲಿ ಬಂಟ್ವಾಳ ತಾ.ನ ಬಿಜೆಪಿ ಬೂತ್ ಸಮಿತಿ ಮೂಡುಪಡುಕೋಡಿ ಬಿಜೆಪಿ ಪ್ರಮುಖರು,ಕಾರ್ಯಕರ್ತರು ಹಾಗೂ ಪೇಜ್ ಪ್ರಮುಖ್,ಬಿಎಲ್ಎ2, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ನೀಡುವ ಕುರಿತ ಸಭೆಯು ಮುಂಡಬೈಲು ಅಣ್ಣಪ್ಪ ಪಂಜುರ್ಲಿ ಸಾನಿಧ್ಯದ ವಠಾರದಲ್ಲಿ ನಡೆಯಿತು. ಚುನಾವಣಾ ಪ್ರಬಾರಿಯಾದ ಬಿಜೆಪಿ ಜಿಲ್ಲಾ ರೈತ ಮೋರ್ಚಾದ ಕಾರ್ಯದರ್ಶಿ ಸಂಜೀವ ಪೂಜಾರಿ ಪಿಲಿಗಾಂಲು ಅಧ್ಯಕ್ಷತೆ ವಹಿಸಿದ್ದರು.
ತಾಲೂಕು ಪಂಚಾಯತ್ ಸದಸ್ಯರಾದ ರಮೇಶ್ ಕುಡುಮೇರ್, ಮೂಡುಪಡುಕೋಡಿಯ ಹಿರಿಯ ನಾಯಕರಾದ ಬೂಬ ಸಪಲ್ಯ ಮುಂಡಬೈಲು,ಮಾಜಿ ಗ್ರಾ.ಪಂ ಸದಸ್ಯರಾದ ಸುನಂದ ಕೊಮ್ಮಲೆ,ಜಯಂತಿ ಕೊಳಲಬಾಕಿಮಾರು,ಬಂಟ್ಟಾಳ ಬಿಜೆಪಿ ಯುವಮೋರ್ಚಾದ ಕಾರ್ಯದರ್ಶಿ ದಯಾನಂದ್ ಎರ್ಮೆನಾಡು, ಬೂತ್ ಸಮಿತಿ ಅಧ್ಯಕ್ಷ ಸತೀಶ್ ಸಪಲ್ಯ ಮುಂಡಬೈಲು, ಪ್ರಧಾನ ಕಾರ್ಯದರ್ಶಿ ದಿನೇಶ್ ಮೂಲ್ಯ ಬಂಗೇರೆಕೆರೆ, ದಾಮೋದರ ಮುಂಡಬೈಲು,ಹಾಗೂ ಕಾರ್ಯಕರ್ತರು ಪ್ರಮುಖರು ಉಪಸ್ಥಿತರಿದ್ದರು .
