ಬಂಟ್ವಾಳ:ಕುವೆಂಪು ವಿಶ್ವವಿದ್ಯಾನಿಲಯದಲ್ಲಿ ರಾಜ್ಯಶಾಸ್ತ್ರ ವಿಭಾಗದ ಪ್ರೋ.ಎಸ್.ಎ.ಜಾವೀದ್ ಇವರ ಮಾರ್ಗದರ್ಶನದಂತೆ ಚೈತ್ರ ಬರಗೇನಹಳ್ಳಿ ಇವರು ಮಂಡಿಸಿದ ‘ರಾಜಕಾರಣ ಮತ್ತು ಸಾಂಸ್ಕ್ರತಿಕ ನಿರೂಪಣೆಗಳು, ವೀರಶೈವ ಸಮುದಾಯದ ಒಂದು ಅಧ್ಯಯನ’ ಮಹಾಪ್ರಬಂಧಕ್ಕೆ ಗೌರವ ಡಾಕ್ಟರೇಟ್ ಪದವಿ ದೊರೆತಿದೆ.
ಈಕೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿದ್ದು, ಚಿಕ್ಕಮಗಳೂರು ಜಿಲ್ಲೆಯ ಬರಗೇನಹಳ್ಳಿ ನಿವಾಸಿ ನಾರಾಯಣ ಗೌಡ ಮತ್ತು ಚಂದ್ರಕಲಾ ಇವರ ಪುತ್ರಿ.
