ಬಂಟ್ವಾಳ :  ಜೇನು ಕೃಷಿಯಿಂದ ನೈಸರ್ಗಿಕ ವಾಗಿ ಪರಾಗಸ್ಪರ್ಶವಾಗುವ ಮೂಲಕ  ಪರಿಸರದ ಎಲ್ಲ ಬೆಳೆಗಳು ಸಮೃದ್ಧ ವಾಗುತ್ತದೆ , ವಾಣಿಜ್ಯವಾಗಿಯೂ ಉತ್ತಮ ಫಲಿತಾಂಶ ಸಿಗುತ್ತದೆ  ಎಂದು ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ ಅವರು ಹೇಳಿದ್ದಾರೆ.    ತೋಟಗಾರಿಕಾ ಇಲಾಖೆ ಬಂಟ್ವಾಳ ತಾಲೂಕು ವತಿಯಿಂದ 2020-21 ಸಾಲಿನ ಜಿಲ್ಲಾ ವಲಯ ಯೋಜನೆಯಡಿ ಎರಡು ದಿನಗಳ ಜೇನು ಕೃಷಿ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು
IMG-20200913-WA0036
ತೋಟಗಾರಿಕಾ ಇಲಾಖೆಯ ಹಿರಿಯ ನಿರ್ದೇಶಕರಾದ ಪ್ರದೀಪ್ ಡಿಸೋಜಾ ರವರು ಪ್ರಾಸ್ತಾವಿಕ ವಾಗಿ ಮಾತನಾಡಿ ಜೇನು ಕೃಷಿಗೆ ಜಿಲ್ಲಾ ಪಂಚಾಯತ್  ತೋಟಗಾರಿಕಾ ಇಲಾಖೆ ಯಿಂದ ಸಹಾಯಧನ ದೊರಕುತ್ತದೆ ಎಂದರು.  ವೇದಿಕೆಯಲ್ಲಿ  ಪತ್ರಕರ್ತ ದಿನೇಶ್ ಶೆಟ್ಟಿ ಕೊಟ್ಟಿಂಜ , ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಸುವರ್ಣ, ಪುದು ಗ್ರಾಮ ಪಂಚಾಯತ್ ಸದಸ್ಯ ಮನೋಜ್ ಆಚಾರ್ಯ ನಾಣ್ಯ  , ಪ್ರಗತಿಪರ ಕೃಷಿಕರಾದ ಶಾಂತ ಡಿ ಚೌಟ , ತರಬೇತುದಾರರಾದ ರಾಧಾಕೃಷ್ಣ ಆರ್.  ಕೋಡಿ ಉಪಸ್ಥಿತರಿದ್ದರು  ಬಂಟ್ವಾಳ ಎಪಿಎಂಸಿ ಉಪಾಧ್ಯಕ್ಷ ವಿಠ್ಠಲ್ ಸಾಲ್ಯಾನ್  ಕಾರ್ಯಕ್ರಮ   ನಿರೂಪಿಸಿದರು

By suddi9

Leave a Reply

Your email address will not be published. Required fields are marked *