ಬಂಟ್ವಾಳ: ಬಿ.ಸಿ.ರೋಡಿನಿಂದ ವಯಾ ಕಲ್ಲಡ್ಕ-ವಿಟ್ಲ- ಕಂಬಳಪದವು-ಪುತ್ತೂರು- ಉಪ್ಪಿನಂಗಡಿ ಮಾರ್ಗವಾಗಿ ಬೆಂಗಳೂರಿಗೆ ನೂತನ ನಾನ್ ಎಸಿ ಸ್ಲೀಪರ್ ಸಾರಿಗೆಯನ್ನು ಆರಂಭಿಸಲಾಗಿದೆ ಎಂದು ಕ.ರಾ.ರ.ಸಾ.ನಿಗಮದ ಬಿ.ಸಿ.ರೋಡು ಘಟಕದ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ.

ಈ ವಾಹನವು ಬಿ.ಸಿ.ರೋಡಿನಿಂದ ರಾತ್ರಿ 21 .00 ಗಂಟೆಗೆ ಹಾಗೂ ವಿಟ್ಲದಿಂದ ರಾತ್ರಿ 21.45 ಗಂಟೆಗೆ ನಿರ್ಗಮಿಸುತ್ತದೆ. ಈ ಬಸ್ಸಿಗೆ ಬಿ.ಸಿ.ರೋಡು,ಕಲ್ಲಡ್ಕ,ವಿಟ್ಲದಿಂದ ಬೆಂಗಳೂರಿಗೆ ಪ್ರಯಾಣಿಸುವವರು ತಮ್ಮ ಆಸನಗಳನ್ನು ಮುಂಗಡ ಕಾದಿರಿಸಲು ಬುಕ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ. ಕಲ್ಲಡ್ಕ,ವಿಟ್ಲ ಅಸುಪಾಸಿನ ಪ್ರಯಾಣಿಕರು ಈ ಬಸ್ಸಿನ ಸದುಪಯೋಗ ಪಡೆಯುವಂತೆ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

By suddi9

Leave a Reply

Your email address will not be published. Required fields are marked *