ಬಂಟ್ವಾಳ:  ಕಾರುಣಿಕ  ಕ್ಷೇತ್ರವಾದ  ಬಂಟ್ವಾಳ ತಾಲೂಕಿನ ಸಜಿಪಮೂಡ ಗ್ರಾಮದ ಪನೋಲಿಬೈಲ್ ಕಲ್ಲುರ್ಟಿ ‌ದೈವಸ್ಥಾನದಲ್ಲಿ ಸೆ.,8 (ಇಂದಿನಿಂದ) ಅಗೆಲು ಸೇವೆ ಆರಂಭವಾಗಲಿದೆ.
ಕೊರೊನಾ ಮಹಾಮಾರಿಯಿಂದಾಗಿ ಅಗೇಲು ಸೇವೆ ಸ್ಥಗಿತಗೊಂಡು ಭಕ್ತಾದಿಗಳ ಸೇವಾ ಕಾರ್ಯ ನಿಂತು ಹೋಗಿತ್ತು. ಆದರೆ ಇದೀಗ ಪನೋಲಿಬೈಲ್ ನಲ್ಲಿ ಸೇವಾ ಕಾರ್ಯಗಳು ಮರು ಪ್ರಾರಂಭಗೊಳ್ಳಲಿದ್ದು, ಭಕ್ತಾದಿಗಳಲ್ಲಿ ಸಂತಸ ಉಂಟುಮಾಡಿದೆ.

ಈ ಮೊದಲಿನಂತೆ ವಾರದ ಮೂರು ದಿನ‌  ಭಾನುವಾರ, ಮಂಗಳವಾರ ಹಾಗೂ ಶುಕ್ರವಾರ ಅಗೇಲು ಸೇವೆ ಇರಲಿದ್ದು, ಸೋಮವಾರ ಹಾಗೂ ಶನಿವಾರ ಹೊರತುಪಡಿಸಿ ವಾರದ ಉಳಿದ ಐದು ದಿನ‌ ಕೋಲ ಸೇವೆ ನಡೆಯಲಿದೆ‌ ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.ಕೋಲ ಸೇವೆ ಕಳೆದ ಶುಕ್ರವಾರವೇ ಆರಂಭಗೊಂಡಿದೆ.

By Suddi9

Leave a Reply

Your email address will not be published. Required fields are marked *