ಬಂಟ್ವಾಳ:ಕೊರೊನ ಮಹಾಮಾರಿ ವ್ಯಾಪಕವಾಗಿ ಹರಡುತ್ತಿದ್ದ ಸಂದರ್ಭದಲ್ಲಿ ಜೀವದ ಹಂಗು ತೊರೆದು ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿದ  ಫರಂಗಿಪೇಟೆ , ತುಂಬೆ ಕ್ಲಿನಿಕ್ ನ್ನು ನಡೆಸುತ್ತಿದ್ದ ವೈದ್ಯರುಗಳನ್ನು ಗುರುತಿಸಿ  ಬಿಜೆಪಿ ಪುದು ಮಹಾ ಶಕ್ತಿ ಕೇಂದ್ರ ದ ವತಿಯಿಂದ  ಸನ್ಮಾನಿಸಲಾಯಿತು.   IMG-20200831-WA0081
ಮಂಜೇಶ್ವರ ಕೊರೊನ ಫ್ರಂಟ್ ಲೈನ್  ಚಿಕಿತ್ಸಾ ಕೇಂದ್ರದ ನೋಡೆಲ್ ಅಧಿಕಾರಿ, ಫರಂಗಿಪೇಟೆ  ಸುರಕ್ಷಾ ಕ್ಲಿನಿಕ್  ನ ವೈದ್ಯರಾದ  ಡಾ. ಪ್ರಭಾಕರ ರೈ ಎಂ  , ಸುರಕ್ಷಾ ಕ್ಲಿನಿಕ್ ನ ಆಯುರ್ವೇದ ವೈದ್ಯೆ  ಶಾರಿಕಾ ಪಿ ರೈ , ಫರಂಗಿಪೇಟೆ ಯಲ್ಲಿ ಕ್ಲಿನಿಕ್ ನಡೆಸುತ್ತಿರುವ ಡಾ.ಅಜಿತ್ ಕುಮಾರ್ , ತುಂಬೆಯ  ಗುಲಾಬಿ ಕ್ಲಿನಿಕ್ ನ  ವೈದ್ಯರಾದ ಡಾ ರಘುರಾಮ್ ಶೆಟ್ಟಿ ಗುಳ್ಳಾಡಿ ಇವರನ್ನು  ಸನ್ಮಾನಿಸಲಾಯಿತು.   ಬಿಜೆಪಿ ಮಂಗಳೂರು ಕ್ಷೇತ್ರ ದ ಉಪಾದ್ಯಕ್ಷ ಯಶವಂತ ಅಮೀನ್ ರವರು ಸರಳ ಸಮಾರಂಭದ ಅದ್ಯಕ್ಷತೆ ವಹಿಸಿದ್ದರು.
ದ.ಕ.ಜಿಲ್ಲಾ ಪಂಚಾಯತ್   ಉಪಾಧ್ಯಕ್ಷೆ ಕಸ್ತೂರಿ ಪಂಜ , ಮುಲ್ಕಿ ಮೂಡಬಿದ್ರೆ ಕ್ಷೇತ್ರದ ಅಧ್ಯಕ್ಷ ಈಶ್ವರ್ ಕಟೀಲ್ , ದ ಕ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಸಂತೋಷ್ ಕುಮಾರ್ ರೈ  ಬೋಳಿಯಾರ್  ಜಯಶ್ರೀ ಕರ್ಕೆರ , ಬಿಜೆಪಿ ಮಂಗಳೂರು ಕ್ಷೇತ್ರ ಸಮಿತಿ ಪ್ರದಾನ ಕಾರ್ಯದರ್ಶಿ ಗಳಾದ  ಹೇಮಂತ್ ಶೆಟ್ಟಿ , ನವೀನ ಪಾದಲ್ಪಾಡಿ ,   ಜಿಲ್ಲಾ ಪಂಚಾಯತ್ ಸದಸ್ಯ ರವೀಂದ್ರ ಕಂಬಳಿ , ಬಂಟ್ವಾಳ ತಾಲೂಕು ಪಂಚಾಯತ್ ಸದಸ್ಯ ಗಣೇಶ್ ಸುವರ್ಣ , ಬಂಟ್ವಾಳ ಎ ಪಿ ಎಂ ಸಿ ಉಪಾಧ್ಯಕ್ಷ ವಿಠ್ಠಲ್ ಸಾಲ್ಯಾನ್ , ಮತ್ತಿತರರು ಉಪಸ್ಥಿತರಿದ್ದರು.  ಪುದು ಮಹಾ ಶಕ್ತಿ ಕೇಂದ್ರದ ಕಾರ್ಯದರ್ಶಿ ಸತೀಶ್ ನಾಯ್ಗ  ಸ್ವಾಗತಿಸಿ, ಪ್ರಸ್ತಾಪಿಸಿದರು , ಪ್ರವೀಣ್ ಶೆಟ್ಟಿ ಸುಜೀರ್  ನಿರೂಪಿಸಿದರು

By suddi9

Leave a Reply

Your email address will not be published. Required fields are marked *