ಬಂಟ್ವಾಳ: ಇಲ್ಲಿನ ಬೆಂಜನಪದವು ಪ್ರದೇಶದ ಶ್ರೀರಾಮ ನಗರ ಸೈಟ್ ರಸ್ತೆಯುದ್ದಕ್ಕೂ ಸಾಲುಮರಗಳು ಸ್ವಚ್ಛಂದವಾಗಿ ಬೆಳೆದಿದ್ದು, ಅಲ್ಲಲ್ಲಿ ಕಸವಿಲೇವಾರಿಗೆ ತೊಟ್ಟಿಗಳನ್ನು ಇಡಲಾಗಿದೆ. ಈ ತೊಟ್ಟಿಗಳಿಂದ ಕಸವನ್ನು ಪ್ರತ್ಯೇಕಿಸಿ, ಗುಂಡಿಯನ್ನು ನಿರ್ಮಿಸಿ ಅದರಲ್ಲೇ ಕಸ ವಿಲೇವಾರಿ ಮಾಡಲಾಗುತ್ತಿದೆ.IMG-20200831-WA0061
ಈ ಎಲ್ಲಾ ಕೆಲಸಗಳನ್ನು ಸ್ಥಳೀಯ ಯುವಕರ ತಂಡ ನಿರ್ವಹಣೆ ಮಾಡುತ್ತಿದ್ದು ಯುವಕರ ಈ ಕಾರ್ಯಕ್ಕೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಪ್ರತಿಯೊಂದು ಗ್ರಾಮದಲ್ಲೂ ಇಂತಹ ವ್ಯವಸ್ಥೆಯಲ್ಲಿ ಯುವಕರು ತೊಡಗಿಕೊಂಡರೆ ಸ್ವಚ್ಛಭಾರತದ ಕಲ್ಪನೆ ಸಹಕಾರಗೊಳ್ಳುವುದರಲ್ಲಿ ಸಂಶಯವಿಲ್ಲ ಎಂದರು. ಅಲ್ಲದೆ ಇತ್ತೀಚೆಗೆ ರಸ್ತೆ ಕೆಸರುಮಯವಾಗಿದ್ದ ಸಂದರ್ಭ ಯುವಕರು ಶ್ರಮದಾನದ ಮೂಲಕ ರಸ್ತೆಗೆ ಕಾಂಕ್ರೀಟ್ ಅಳವಡಿಸಿದ್ದರು.ಬೆಂಜನಪದವು ಶ್ರೀರಾಮನಗರದ ಶ್ರೀ ದುರ್ಗಾ ಮಿತ್ರ ಮಂಡಳಿ ಕಚೇರಿಯಲ್ಲಿ ಸೋಮವಾರ ನೆತ್ರಕೆರೆ ಬಿಜೆಪಿ ಬೂತ್ ಸಮಿತಿ ವತಿಯಿಂದ ಆಯುಷ್ಮಾನ್ ಕಾರ್ಡ್ ಅಭಿಯಾನ ಮತ್ತು ವಿತರಣೆ ಕಾರ್ಯಕ್ರಮದಲ್ಲಿ ಶಾಸಕರು ಭಾಗವಹಿಸಿದರು.IMG-20200831-WA0060
ಅಧಿಕಾರಿಗಳಿಗೆ ತರಾಟೆ:
ಈ ಸಂದರ್ಭ ಸ್ಥಳೀಯರ ಪರಿಶ್ರಮದಲ್ಲಿ ನಿರ್ಮಾಣವಾಗುತ್ತಿರುವ ಹಿಂದು ರುದ್ರಭೂಮಿ ಗೆ ಪಂಚಾಯತ್ ನಿಂದ ತಡೆಯಾಜ್ಞೆ ಬಂದಿರುವ ಬಗ್ಗೆ ಸ್ಥಳೀಯರು ಶಾಸಕರಲ್ಲಿ ದೂರು ನೀಡಿದರು. ಕೂಡಲೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಶಾಸಕರು ರುದ್ರಭೂಮಿ ನಿರ್ಮಾಣಕ್ಕೆ ಅವಕಾಶ ಕಲ್ಪಿಸುವಂತೆ ಸೂಚಿಸಿದರು. ಅಲ್ಲದೆ ಸ್ಥಳೀಯರು ಮುಂದಿಟ್ಟ ಕೆಲ ಸಮಸ್ಯೆಗಳನ್ನು ಕೂಡ ತಕ್ಷಣ ಪರಿಹರಿಸುವ ಭರವಸೆಯನ್ನು ಶಾಸಕ ರಾಜೇಶ್ ನಾಯ್ಕ್ ನೀಡಿದರು.

ಈ ಸಂದರ್ಭ ನೆತ್ರಕೆರೆ ಬಿಜೆಪಿ ಬೂತ್ ಸಮಿತಿ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ, ಪ್ರಧಾನ ಕಾರ್ಯದರ್ಶಿ ಸಂಜೀವ ಬೆಳ್ಚಡ, ಪ್ರಮುಖರಾದ ದಾಮೋದರ ನೆತ್ರಕೆರೆ, ದೇವಿಪ್ರಸಾದ್ ಎಂ ದೇವಂದಬೆಟ್ಟು, ಶರತ್ ಬೆಂಜನಪದವು, ಸಂದೀಪ್ ಬೆಂಜನಪದವು, ಹರೀಶ್ ಬೆಂಜನಪದವು, ಅಕೇಶ್ ಬೆಂಜನಪದವು, ದಾಮೋದರ ಬೆಂಜನಪದವು, ರೇಶ್ಮಾ ಬೆಂಜನಪದವು, ವಸಂತಿ ಬೆಂಜನಪದವು, ಅಶ್ವಿನಿ ಬೆಂಜನಪದವು, ಮಾಧವ ಬೆಂಜನಪದವು, ಕೇಶವ ಬೆಂಜನಪದವು, ವರುಣ್ ಬೆಂಜನಪದವು ಮತ್ತಿತರರಿದ್ದರು.

By suddi9

Leave a Reply

Your email address will not be published. Required fields are marked *