ಕುಪ್ಪೆಪದವು: ಶ್ರೀ ದುರ್ಗೇಶ್ವರಿ ದೇವಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯದ ಪ್ರಯುಕ್ತ ಶಿಲ್ಪಿಗಳಿಂದ ಶಿಲಾ ಕೆತ್ತನೆಗೆ ಶಿಲಾಮುಹೂರ್ತ ಕಾರ್ಯಕ್ರಮವು ಗುರುವಾರ ದೇವಸ್ಥಾನದಲ್ಲಿ ನಡೆಯಿತು. ಅಂದಾಜು ಸುಮಾರು ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ದೇವಸ್ಥಾನದ ಜೀರ್ಣೋದ್ದಾರ ಕಾರ್ಯ ನಡೆಯಲಿದ್ದು, ದೇವಿಗೆ ಭವ್ಯ ದೇಗುಲ ನಿರ್ಮಾಣವಾಗಲಿದೆ.
ಬಲ್ಯೊಟ್ಟು ಮಠದ ಶ್ರೀ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ದೇವಸ್ಥಾನದ ತಂತ್ರಿಗಳಾದ ವೇದಮೂರ್ತಿ ಎಡಪದವು ಶ್ರೀರಾಧಾಕೃಷ್ಣ ತಂತ್ರಿಗಳು, ಅರ್ಚಕ ಕೆ. ಸದಾಶಿವ ಕಾರಂತ, ಮ್ಯಾನೇಜಿಂಗ್ ಟ್ರಸ್ಟಿ ಪ್ರವೀಣ್ ಕುಮಾರ್ ಜೈನ್ ಅಗರಿ, ಉಪ ಮ್ಯಾನೇಜಿಂಗ್ ಟ್ರಸ್ಟಿ ತುಳಸೀದಾಸ್ ಅಮೀನ್, ಟ್ರಸ್ಟ್ ನ ಕಾರ್ಯದರ್ಶಿ ಉಮೇಶ್ ಅಮೀನ್ ನಾಗಂದಡಿ, ಕೋಶಾಧಿಕಾರಿ ಪುರುಷೋತ್ತಮ್, ಕೆ. ಟ್ರಸ್ಟಿಗಳಾದ ಸಂಜೀವ ಶೆಟ್ಟಿ ನಡುಗುಂಡ್ಯ, ರಾಮಣ್ಣ ನಾಯ್ಕ್ ಅಂಗಡಿಬಳಿ ಕಿಲೆಂಜಾರು, ಚಂದ್ರಹಾಸ್ ಶೆಟ್ಟಿ ಮುತ್ತೂರು, ವಿಕ್ರಂ ಭಟ್ ಕುಪ್ಪೆಪದವು, ವಸಂತಿ ಅಗರಿ, ಶಿಲ್ಪಿ ಕುಪ್ಪುಸ್ವಾಮಿ ಕಾರ್ಕಳ, ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಅಜಿತ್ ಕುಮಾರ್ ಜೈನ್, ಕಾರ್ಯದರ್ಶಿ ಅರ್ಜುನ್ ಪಂಡಿತ್, ದುರ್ಗೇಶ್ವರಿ ಸೇವಾ ಸಮಿತಿಯ ಅಧ್ಯಕ್ಷ ಜಗದೀಶ್ ಕುಲಾಲ್ ಪಾಕಜೆ, ಕಾರ್ಯದರ್ಶಿ ಶಿವರಾಮ್ ಕಾರಂತ, ಸಮಿತಿಯ ಸದಸ್ಯರು, ಮುಖಂಡರುಗಳು, ಕಿಲೆಂಜಾರು, ಕುಳವೂರು ಮತ್ತು ಮುತ್ತೂರು ಗ್ರಾಮಗಳ ಭಕ್ತಾದಿಗಳು ಉಪತಿತರಿದ್ದರು.
