ಬಂಟ್ವಾಳ: ವಿಶ್ವ ಹಿಂದೂ ಪರಿಷತ್, ಬಜರಂಗದಳ ಬಂಟ್ವಾಳ ತಾಲೂಕು ಪಿಲಾತಬೆಟ್ಟು ಶ್ರೀ ರಾಮ ಶಾಖೆ ಮತ್ತು ಶ್ರೀ ರಾಮ ನಗರ ಶ್ರೀ ರಾಮಾಂಜನೇಯ ಭಜನ ಮಂದಿರದ ಸಹಕಾರದಲ್ಲಿ ಅಯೋಧ್ಯೆಯಲ್ಲಿ ನಡೆದ ಶ್ರೀ ರಾಮ ಮಂದಿರ ನಿರ್ಮಾಣದ ಭೂಮಿಪೂಜೆಯ ಪ್ರಯುಕ್ತ ವಿಶೇಷ ಪೂಜೆ, ಗುರು ಪೂಜೆ, ರಕ್ಷಾ ಬಂಧನ ಮತ್ತು ಸಮ್ಮಾನ ಕಾರ್ಯಕ್ರಮ ಭಜನ ಮಂದಿರದಲ್ಲಿ ಆ.16ರಂದು ಜರಗಿತು.
ವಿ.ಹಿಂ.ಪ. ಜಿಲ್ಲಾ ಪ್ರಮುಖ್ ಸರಪಾಡಿ ಅಶೋಕ ಶೆಟ್ಟಿ, ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ, ಸ್ವರ್ಣೋದ್ಯಮಿ ಲೋಕೇಶ್ ಆಚಾರ್ಯ, ಉದ್ಯಮಿಗಳಾದ ಹರೀಂದ್ರ ಪೈ, ಶಂಕರ ಶೆಟ್ಟಿ , ಬಜರಂಗದಳ ಜಿಲ್ಲಾ ಸಹ ಸಂಚಾಲಕರಾದ ಭರತ್ ಕುಮ್ಡೇಲು, ಗುರುರಾಜ್ ಬಂಟ್ವಾಳ, ಬಜರಂಗದಳ ತಾಲೂಕು ಸಂಚಾಲಕ ಶಿವಪ್ರಸಾದ್ ತುಂಬೆ, ಸಹ ಸಂಚಾಲಕ ಅಶ್ವಥ್ ಪುಂಜಾಲಕಟ್ಟೆ , ಭಜನ ಮಂದಿರ ಪದಾ„ಕಾರಿಗಳಾದ ಗಂಗಾಧರ ಗೌಡ, ಹೇಂತ ಕೋಟ್ಯಾನ್, ವಿ.ಹಿಂ.ಪ. ಪಿಲಾತಬೆಟ್ಟು ಶಾಖೆ ನಿಕಟಪೂರ್ವ ಅಧ್ಯಕ್ಷ ಲೋಹಿತ್, ಅಧ್ಯಕ್ಷ ಅಕ್ಷತ್ ದೈಕಿನಕಟ್ಟೆ, ಬಜರಂಗದಳ ಪಿಲಾತಬೆಟ್ಟು ಶಾಖೆ ಸಂಚಾಲಕ ಕಿರಣ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಕರ ಸೇವಕರಾದ ಸರಪಾಡಿ ಅಶೋಕ ಶೆಟ್ಟಿ, ಪ್ರಭಾಕರ ಪಿಎಂ, ಆಶಾ ಕಾರ್ಯಕರ್ತೆಯರಾದ ಗುಣವತಿ ನಾಕುನಾಡು, ಪ್ರಮೀಳಾ ನಯನಾಡು, ಭವ್ಯಾ ಪೆಲತ್ತಕಟ್ಟೆ ಅವರನ್ನು ಸಮ್ಮಾನಿಸಲಾಯಿತು.
