ಬಂಟ್ವಾಳ:  ಮಿನಿ ಟೆಂಪೊವೊಂದರಲ್ಲಿ  ಅಕ್ರಮವಾಗಿ ಜಾನುವಾರು ಸಾಗಾಟಮಾಡುವುದನ್ನು  ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಪತ್ತೆ ಹಚ್ಚಿ ಪುಂಜಾಲಕಟ್ಟೆ  ಪೊಲೀಸ್ ಠಾಣೆಗೆ ಒಪ್ಪಿಸಿರುವ  ಘಟನೆ ಮಂಗಳವಾರ ಬಂಟ್ವಾಳ ತಾ.ನ ಕೊಡಂಬೆಟ್ಟು ಗ್ರಾಮದ ಹರ್ಕಾಡಿ ಎಂಬಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿ ಇಬ್ಬರನ್ನು ಬಂಧಿಸಲಾಗಿದೆ. ಇಲ್ಲಿನ ಬಂಗೇರಕೆರೆ ನಿವಾಸಿಗಳಾದ ಶಹಾಬುದ್ದೀನ್ ಮತ್ತು ಇಲಿಯಾಸ್ ಬಂಧಿತ ಆರೋಪಿಗಳಾಗಿದ್ದಾರೆ.IMG-20200818-WA0067

ಅಕ್ರಮ ಜಾನುವಾರು ಸಾಗಾಟದ ಟೆಂಪೋವನ್ನು ಗಮನಿಸಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತರು  ಹರ್ಕಾಡಿಯಲ್ಲಿ ಅಡ್ಡ ಹಾಕಿ ಪರಿಶೀಲಿಸಿದಾಗ ಟೆಂಪೋದ ಹಿಂಭಾಗದಲ್ಲಿ ಮುಚ್ಚಿದ ಸ್ಥಿತಿಯಲ್ಲಿ ಹಿಂಸಾತ್ಮಕವಾಗಿ ಜಾನವಾರಗಳನ್ನು   ಕಟ್ಟಿಹಾಕಿದ ಸ್ಥಿತಿಯಲ್ಲಿತ್ತು.  ತಕ್ಷಣ ಯುವಕರು ಪುಂಜಾಲಕಟ್ಟೆ ಪೊಲೀಸರಿಗೆ ಮಾಹಿತಿ ನೀಡಿದ್ದು,ಸ್ಥಳಕ್ಕಾಗಮಿಸಿದ ಪೊಲೀಸರು ಆರೋಪಿಗಳಿಬ್ಬರನ್ನು ಬಂಧಿಸಿ, ಅದರಲ್ಲಿದ್ದ ಎರಡು ದನ ಹಾಗೂ ಒಂದು ಕರು ಸಹಿತ ಟೆಂಪೋವನ್ನು ವಶಕ್ಕೆ ಪಡೆದುಕೊಂಡರು.  ಈ ಬಗ್ಗೆ ಕೇಸು ದಾಖಲಿಸಿಕೊಂಡಿರುವ ಪುಂಜಾಲಕಟ್ಟೆ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

By suddi9

Leave a Reply

Your email address will not be published. Required fields are marked *