ಬಂಟ್ವಾಳ: ರೋಟರಿ ಕ್ಲಬ್ ಬಂಟ್ವಾಳ ಟೌನ್ ಮತ್ತು ಮಂಚಿ ವ್ಯವಸಾಯ ಸೇವಾ ಸಹಕಾರಿ ಸಂಘದ ಜಂಟಿ ಆಶ್ರಯದಲ್ಲಿ ಸದಸ್ಯರು ಮತ್ತು ಗ್ರಾಮಸ್ಥರು ಸೇರಿದಂತೆ ಸುಮಾರು 700 ಮಂದಿ ವಿವಿಧ ಜಾತಿಯ ಸಸಿಗಳನ್ನು ವಿತರಿಸಲಾಯಿತು.
ಬುಧವಾರ ಮಂಚಿ ವ್ಯವಸಾಯ ಸೇವಾ ಸಹಕಾರಿ ಸಂಘದ ಕಚೇರಿ ವಠಾರದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಸಿಗಳನ್ನುು ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ ಬಂಟ್ವಾಳ ಟೌನ್ ನ ಅಧ್ಯಕ್ಷ ರೋ ಪಿ.ಎಚ್ .ಎಫ್ ಪದ್ಮನಾಭ ರೈ ವಹಿಸಿದ್ದರು, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಚಂದ್ರಹಾಸ ಕರ್ಕೇರ , ಬ್ಯಾಂಕಿನ
ಪ್ರಬಂಧಕರಾದ ನಾರಾಯಣ್, ಉಪಾಧ್ಯಕ್ಷ ವಿಶ್ವನಾಥ್ ನಾಯ್ಕ್, ರೋ. ಸ್ಟೀವನ್ ಡಿಸೋಜಾ,ಗ್ರಾಮ ಪಂಚಾಯತ್ ನ ನಿಕಟಪೂರ್ವ ಸದಸ್ಯ ಇಬ್ರಾಹಿಂ ಬದ್ರುದ್ದೀನ್ , ರೋ. ಸುಜಾತ ಪಿ ರೈ, ಸುದೀರ್ ಶೆಟ್ಟಿ, ಸತೀಶ್ ಕುಮಾರ್, ಚಿತ್ತರಂಜನ್ ಶೆಟ್ಟಿ, ಕೇಶವ ನಾಯ್ಕ್, ರಮೇಶ್ ಶೆಟ್ಟಿ, ಗಣೇಶ್ ಶೆಟ್ಟಿ, ಆಲ್ಬರ್ಟ್ ಮೆನೆಜಸ್, ಚಂದ್ರಶೇಖರ ಪೂಜಾರಿ ಉಪಸ್ಥಿತರಿದ್ದರು.
ಮಂಚಿ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಉಮ್ಮರ್ ಸ್ವಾಗತಿಸಿದರು. ಕಾರ್ಯದರ್ಶಿ ರೋ ಕಿಶೋರ್ ಯಸ್ ಕುಮಾರ್ ವಂದಿಸಿದರು.

