ಬಂಟ್ವಾಳ: ಮೆಲ್ಕಾರ್ ಯುವ ಸಂಗಮದ ವತಿಯಿಂದ ಜರಗಿದ ೭೪ನೇ ಸ್ವಾತಂತ್ರೋತ್ಸವ ಸಮಾರಂಭದ ಹಿನ್ನಲೆಯಲ್ಲಿ ಭಾರತೀಯ ಭೂಸೇನೆಯ ನಿವೃತ್ತ ಯೋಧ ಬರಿಮಾರ್‌ನ ಸತೀಶ್ ಸುವರ್ಣ. ಪಿ ಅವರನ್ನು ಸನ್ಮಾನಿಸಲಾಯಿತು.
ಯುವ ಸಂಗಮದ ಅಧ್ಯಕ್ಷರಾದ ಓಂಪ್ರಕಾಶ್ ಕಾರ್ಯದರ್ಶಿ ಹರೀಶ್ ಶೆಣೈ, ಕೋಶಾಧಿಕಾರಿ ರಾಜೇಶ್ ನಾಯಕ್ ಬೋಳಂಗಡಿ, ಗೌರವಾಧ್ಯಕ್ಷರಾದ ಯಂ.ಯನ್. ಕುಮಾರ್, ಕೃಷ್ಣ ನಾಯ್ಕ, ಪುರಸಭೆ ಸದಸ್ಯೆ ಜೆಸಿಂತಾ ಡಿ’ಸೋಜ, ದಿನೇಶ್ ಟೈಲರ್ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ಶಂಕರ ಆಚಾರ್ಯ ನಿರೂಪಿಸಿದರು. ಮಾಜಿ ಪುರಸಭಾ ಸದಸ್ಯೆ ವಸಂತಿ ಗಂಗಾಧರ್ ವಂದಿಸಿದರು.

