ಬಂಟ್ವಾಳ: ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ(ಜೆಸಿಟಿಯು) ಆಶ್ರಯದಲ್ಲಿ ನಡೆಯುತ್ತಿರುವ  ದೇಶವ್ಯಾಪಿ “ಭಾರತ ಉಳಿಸಿ” ಆಂದೋಲನದ ಭಾಗವಾಗಿ ಬಂಟ್ವಾಳ ತಾಲೂಕು ಜೆಸಿಟಿಯು ನೇತೃತ್ವದಲ್ಲಿ ಸೋಮವಾರ ಬಿ.ಸಿ.ರೋಡಿನ ಮಿನಿ ವಿಧಾನ ಸೌಧದ ಎದುರು ಪ್ರತಿಭಟನೆ ನಡೆಯಿತು.  IMG-20200810-WA0007
 ಕೇಂದ್ರ ಸರಕಾರ ಕೋವಿಡ್-೧೯ ಸೋಂಕು ಹರಡುವುದನ್ನು ಸಮರ್ಥವಾಗಿ ನಿಯಂತ್ರಿಸುವ ಬದಲು ಲಾಕ್ ಡೌನ್ ಹೇರಿ ಬಡ ಕಾರ್ಮಿಕರ ಹಾಗೂ ಮಧ್ಯಮ ವರ್ಗವನ್ನು ಸಂಕಷ್ಟಕ್ಕೀಡುಮಾಡಿದೆ.  ಐತಿಹಾಸಿಕ ಹೋರಾಟಗಳಿಂದ ಪಡೆದಂತಹ ಭೂ ಸುಧಾರಣೆ ಕಾಯ್ದೆ, ಕಾರ್ಮಿಕ ಕಾಯ್ದೆ, ಗಳಿಗೆ ಸುಗ್ರಿವಾಜ್ಞೆ ಮೂಲಕ ತಿದ್ದು ಪಡಿ ತಂದು ರೈತ ಕಾರ್ಮಿಕರನ್ನು ಬೀದಿ ಪಾಲು ಮಾಡಲು ಹೊರಟಿದೆ ಎಂದು ಪ್ರತಿಭಟನಾಕಾರರು  ಆರೋಪಿಸಿದರು.
ಎಐಟಿಯುಸಿ ಬಂಟ್ವಾಳ ತಾಲೂಕು ಕರ‍್ಯದರ್ಶಿ ಬಿ.ಶೇಖರ್, ಸಿಐಟಿಯು ತಾಲೂಕು ಕರ‍್ಯದರ್ಶಿ ರಾಮಣ್ಣ ವಿಟ್ಲ, ಡಿ ವೈ ಎಫ್ ಐ ತಾಲೂಕು ಕಾರ‍್ಯದರ್ಶಿ ತುಳಸೀದಾಸ್ ವಿಟ್ಲ, ಎಐವೈಎಫ್ ತಾಲೂಕು ಅಧ್ಯಕ್ಷ ಪ್ರೇಮ್ ನಾಥ್ ಕೆ., ಎನ್ ಎಫ್ ಐ ಡಬ್ಲೂ ಜಿಲ್ಲಾ ಕಾರ‍್ಯದರ್ಶಿ ಭಾರತಿ ಪ್ರಶಾಂತ್ ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದರು.  ಎಐಟಿಯುಸಿ ಮುಂದಾಳು ಸರಸ್ವತಿ ಕಡೇಶಿವಾಲಯ, ಸರೋಜಿನಿ ಕುರಿಯಾಳ, ಸಿಐಟಿಯು ಮುಂದಾಳು ಲೋಲಾಕ್ಷಿ, ಎಐವೈಎಫ್ ತಾಲೂಕು ಕಾರ‍್ಯದರ್ಶಿ ಶ್ರೀನಿವಾಸ ಭಂಡಾರಿ, ಹರ್ಷಿತ್ ಸುವರ್ಣ, ಎ ಐ ಎಸ್ ಎಫ್ ನಾಯಕ ಹರ್ಷಿತ್ ಕೆ, ಡಿವೈಎಫ್‌ಐ ಮುಖಂಡರಾದ ನ್ಯಾಯವಾದಿ ಮಹಮ್ಮದ್ ಗಝಾಲಿ, ಸುರೇಂದ್ರ ಕೋಟ್ಯಾನ್, ಖಲೀಲ್ ಬಾಪು ಉಪಸ್ಥಿತರಿದ್ದರು.ಪ್ರಾರಂಭದಲ್ಲಿ ಎಐಟಿಯುಸಿ ಮುಖಂಡ ಸುರೇಶ್ ಕುಮಾರ್ ಬಂಟ್ವಾಳ್  ಸ್ವಾಗತಿಸಿದರು.  ಸಿಐಟಿಯು ಮುಖಂಡ ಉದಯ ಕುಮಾರ್ ವಂದಿಸಿದರು.

By Suddi9

Leave a Reply

Your email address will not be published. Required fields are marked *