ಬಂಟ್ವಾಳ: ಶಿಕ್ಷಣ ಸಚಿವರಿಂದಲೇ ಅಭಿನಂದನೆ ಮತ್ತು ವಿಶೇಷ ಮೆಚ್ಚುಗೆ ಗಳಿಸಿದ್ದ ಬಂಟ್ವಾಳ ತಾಲೂಕಿನ ಎಸ್.ವಿ.ಎಸ್.ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾಗಿ ಯಾರ ಸಹಾಯವೂ ಪಡೆಯದೆ ಕಾಲಿನ ಬೆರಳುಗಳಿಂದಲೇ ಉತ್ತರ ಬರೆದ ಬಂಟ್ವಾಳದ ಹತ್ತನೇ ತರಗತಿ ವಿದ್ಯಾರ್ಥಿ  ಕೌಶಿಕ್  ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ  424 ಅಂಕ ಗಳಿಸುವ ಮೂಲಕ ಶೇ.68 ಅಂಕ ಗಳಿಸಿದ್ದಾನೆ. IMG-20200810-WA0052

ಈತನಿಗೆ ಹೆತ್ತವರಾದ ರಾಜೇಶ್ ಆಚಾರ್ಯ ಮತ್ತು ಜಲಜಾಕ್ಷಿ ದಂಪತಿ ಸಿಹಿ ತಿನಿಸಿ ಸಂಭ್ರಮಿಸಿದರು. ಕನ್ನಡದಲ್ಲಿ 96, ಆಂಗ್ಲ ಭಾಷೆಯಲ್ಲಿ 50, ಸಂಸ್ಕೃತದಲ್ಲಿ 83, ಗಣಿತದಲ್ಲಿ 63, ವಿಜ್ಞಾನದಲ್ಲಿ 54, ಸಮಾಜದಲ್ಲಿ 78 ಅಂಕ ಗಳಿಸಿದ್ದು, ಒಟ್ಟು 424 ಅಂಕಗಳು ಕೌಶಿಕ್ ಗೆ ಬಂದಿದ್ದು,ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗಿ ಶಾಲೆ ಮತ್ತು ರಾಜ್ಯಕ್ಕೆ ಹೆಮ್ಮೆ ತಂದಿದ್ದಾನೆ. ಈ ಕುರಿತು ಪ್ರತಿಕ್ರಿಯಿಸಿರುವ ಕೌಶಿಕ್, ಪಿಯುಸಿ ವಾಣಿಜ್ಯ ವಿದ್ಯಾಭ್ಯಾಸ ನಡೆಸುವ ಇಚ್ಛೆ ಇದ್ದು, ಇದಕ್ಕೆ ಶಾಸಕ ರಾಜೇಶ್ ನಾಯ್ಕ್ ಅವರು ನೆರವು ನೀಡುವುದಾಗಿ ತಿಳಿಸಿದ್ದಾರೆ ಎಂದರು.
IMG-20200710-WA0029ಕೌಶಿಕ್ ತನ್ನ ಅಣ್ಣ ಕಾರ್ತಿಕ್, ತಮ್ಮ ಮೋಕ್ಷಿತ್ ಜೊತೆ ಬಂಟ್ವಾಳ ಕಂಚಿಕಾರಪೇಟೆಯ ಪುಟ್ಟ ಮನೆಯಲ್ಲಿ ವಾಸವಿದ್ದಾನೆ. ಕಳೆದ ತಿಂಗಳು ಬಂಟ್ವಾಳಕ್ಕಾಗಮಿಸಿದ ರಾಜ್ಯದ ಶಿಕ್ಷಣ ಸಚಿವ ಎಸ್ .ಸುರೇಶ್ ಕುಮಾರ್ ಅವರು ಪೊಳಲಿ ಕ್ಷೇತ್ರದಲ್ಲಿ ಕೌಶಿಕ್ ನನ್ನು ಭೇಟಿಯಾಗಿ ಅತನಿಂದ ಕಾಲಬೆರಳಿನಲ್ಲಿ ಬರೆಸಿ ಕುತೂಹಲದಿಂದ ಬರವಣಿಗೆಯ ಮೇಲೆ ಕಣ್ಮೆಣಾಡಿಸಿ ಮೆಚ್ಚುಗೆ ಕೂಡ ವ್ಯಕ್ತಪಡಿಸಿದ್ದರು.ಅತನ ಪಠ್ಯೇತರ ಚಟುವಟಿಕೆಯನ್ನು ಕಂಡು ಅಭಿನಂದಿಸಿದ್ದರು.

By Suddi9

Leave a Reply

Your email address will not be published. Required fields are marked *