ಗಮನಿಸಿ
ಆತ್ಮೀಯರೇ,

1. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯತ್ವ ನವೀಕರಣ / ಹೊಸ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿದವರ ಗುರುತು ಚೀಟಿ  ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಲಭ್ಯವಿದೆ.
ಆ.6ಂದು  ಬೆಳಗ್ಗೆ 11ಗಂಟೆಯಿಂದ  ವಿತರಿಸಲಾಗುವುದು.
2. ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಹೆಲ್ತ್ ಕಾರ್ಡ್  ನವೀಕರಣಕ್ಕೆ ಅರ್ಜಿ ಸಲ್ಲಿಸಿದವರು ಆರೋಗ್ಯ ಕಾರ್ಡ್ ನ್ನು ಸಂಘದ ಗುರುತು ಚೀಟಿಯೊಂದಿಗೆ   ಪಡೆಯಬಹುದಾಗಿದೆ.
3. ಉದ್ದೇಶಿತ ಪತ್ರಕರ್ತರ  ಗೃಹ ನಿರ್ಮಾಣ ಸಹಕಾರಿ ಸಂಘದ ಸದಸ್ಯತ್ವ  ಮತ್ತು ಷೇರು ಖರೀದಿಗೆ   ಇನ್ನೂ  ಅರ್ಜಿ ಸಲ್ಲಿಸದೆ ಇರುವವರು ತಕ್ಷಣ ಅರ್ಜಿ ಸಲ್ಲಿಸುವಂತೆ ಮತ್ತೊಮ್ಮೆ ಕೋರಲಾಗಿದೆ.
4. ಜಿಲ್ಲಾ ಪತ್ರಕರ್ತರ ಸಂಘಕ್ಕೆನೂತನವಾಗಿ ಸದಸ್ಯರಾದವರಿಗೂ ಸಹಕಾರಿ ಸಂಘದ ಸದಸ್ಯತ್ವ  ಮತ್ತು ಷೇರು ಖರೀದಿಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

* ಪ್ರತಿಯೊಂದು ಷೇರಿನ ಮುಖಬೆಲೆ 1 ,000 ರೂ.
* ಪ್ರವೇಶ ಧನ 100 ರೂ.
* ಷೇರು ಶುಲ್ಕ 100 ರೂ.
* ಅರ್ಜಿ ಸಲ್ಲಿಸುವಾಗ ಆಧಾರ್ ಕಾರ್ಡ್ ಪ್ರತಿ  1 ಮತ್ತು ಇತ್ತೀಚಿನ ಭಾವಚಿತ್ರ 3ನ್ನು ಕಡ್ಡಾಯವಾಗಿ ಸಲ್ಲಿಸತಕ್ಕದ್ದು.

*ನಿಗದಿತ ಅರ್ಜಿ ಫಾರಂ ಸಂಘದ ಕಚೇರಿಯಲ್ಲಿ ಲಭ್ಯವಿದೆ.
* ಸಂಘದ ಐಡೆಂಟಿಟಿ ಕಾರ್ಡ್, ಆರೋಗ್ಯ ಕಾರ್ಡ್, ಸಹಕಾರಿ ಸಂಘದ ಸದಸ್ಯತ್ವ ಮತ್ತು ಷೇರು ಖರೀದಿ ಗೆ ಸಂಬಂಧಿಸಿ  ಮಾಹಿತಿಗಾಗಿ ಪ್ರೆಸ್ ಕ್ಲಬ್ ಮ್ಯಾನೇಜರ್ ಅಭಿಷೇಕ್  ಇವರನ್ನು ಕಚೇರಿ ವೇಳೆ ಸಂಪರ್ಕಿಸಬೇಕಾಗಿ ವಿನಂತಿ.

ಇಬ್ರಾಹಿಂ ಅಡ್ಕಸ್ಥಳ
ಪ್ರಧಾನ ಕಾರ್ಯದರ್ಶಿ
ದ.ಕ.ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ(ರಿ),

By suddi9

Leave a Reply

Your email address will not be published. Required fields are marked *