ಗಂಜಿಮಠ : ಮಂಗಳೂರು ತಾಲೂಕಿನ ಗಂಜಿಮಠ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಪ್ಯಾಕೇಜಿಂಗ್ ಕಂಪೆನಿಯೊಂದರ ಕಾರ್ಮಿಕರಿಗೆ ರ್ಯಾಪಿಡ್ ಆಂಟಿಝೆನ್ ಟೆಸ್ಟ್ ಮಾಡಲಾಗಿದ್ದು, ಕಳೆದ ಐದು ದಿನಗಳಲ್ಲಿ 205 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ. ಸದ್ಯ ಈ ಪ್ರದೇಶದ ನಾಗರಿಕರು ತೀವ್ರ ಆತಂಕ ವ್ಯಕ್ತಪಡಿಸುವಂತಾಗಿದೆ.gur-aug-4-Bharath shetty

ಕಳೆದ ವಾರ ಸಹಾಯಕ ಆಯುಕ್ತ ಮದನ ಮೋಹನ್, ತಹಶೀಲ್ದಾರ್ ಗುರುಪ್ರಸಾದ್ ಮತ್ತು ಗುರುಪುರ ನಾಡಕಚೇರಿ ಉಪತಹಶೀಲ್ದಾರ್ ಶಿವಪ್ರಸಾದ್ ಅವರೊಂದಿಗೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿರುವ ತನ್ನ ಕಚೇರಿಯಲ್ಲಿ ಮಾತುಕತೆ ನಡೆಸಿದ ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ, ತಕ್ಷಣವೇ ಖಾಸಗಿ ಕಂಪೆನಿಯ ಕಾರ್ಮಿಕರಿಗೆ ಕೋವಿಡ್-19 ಪರೀಕ್ಷೆ ನಡೆಸಿ, ಕಂಪೆನಿ ಸೀಲ್‍ಡೌನ್ ಮಾಡುವಂತೆ ಸೂಚಿಸಿದ್ದರು. ಇದರಂತೆ ಮಂಗಳೂರಿನ ಜಿಲ್ಲಾ ಆರೋಗ್ಯ ಕೇಂದ್ರದ ವೈದ್ಯಕೀಯ ತಂಡಗಳು ಕಳೆದ ಐದು ದಿನಗಳಿಂದ ಖಾಸಗಿ ಕಂಪೆನಿಯ ಕಾರ್ಮಿಕರೆಲ್ಲರ ಪರೀಕ್ಷೆ ನಡೆಸಿದೆ. ಇದುವರೆಗೆ ಒಟ್ಟು 205 ಮಂದಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

ಪಾಸಿಟಿವ್ ಪತ್ತೆಯಾದ 139 ಮಂದಿಯನ್ನು ಕೊಂಪದವಿನ ಮೊರಾರ್ಜಿ ದೇಸಾಯಿ ಶಾಲೆಯ ಕೊಠಡಿಗಳಲ್ಲಿ ಐಸೋಲೇಶನ್‍ನಲ್ಲಿಡಲಾಗಿದ್ದರೆ, ಉಳಿದ 66 ಮಂದಿಯನ್ನು ಹೋಂ ಕ್ವಾರಂಟೈನ್‍ನಲ್ಲಿಡಲಾಗಿದೆ. ಸೋಮವಾರದಂದು(ಆ. 3) ಕಂಪೆನಿಗೆ ಸ್ಯಾನಿಟೈಝರ್ ಮಾಡಲಾಗಿದ್ದು, ಕಂಪೆನಿ ಮುಚ್ಚಲ್ಪಟ್ಟಿತ್ತು. ಮಂಗಳವಾರ ಕಂಪೆನಿ ತೆರೆದಿದ್ದರೂ, ಸ್ಥಳೀಯವಾಗಿ ವ್ಯಾಪಕಗೊಂಡಿರುವ ಕೊರೊನಾ ಭೀತಿಯಿಂದ ಕಾರ್ಮಿಕರ ಸಂಖ್ಯೆ ತೀರಾ ವಿರಳವಾಗಿತ್ತು ಎಂದು ಸ್ಥಳೀಯ ಮೂಲವೊಂದು ತಿಳಿಸಿದೆ.

ಕಂಪೆನಿಯಲ್ಲಿ ಉತ್ತರದ ರಾಜ್ಯಗಳ ಸಹಿತ ಗಂಜಿಮಠ, ಗುರುಪುರ, ವಾಮಂಜೂರು, ಕುಪ್ಪೆಪದವು, ಎಡಪದವು, ಮಳಲಿ, ಮುತ್ತೂರು, ಇರುವೈಲು, ಕುಳವೂರು, ಬಂಟ್ವಾಳ, ಬಿ ಸಿ ರೋಡ್, ಮಂಗಳೂರು ಮೊದಲಾದೆಡೆಯ ಸುಮಾರು 3,000 ಕಾರ್ಮಿಕರು ಮೂರು ಪಾಳಿಯಲ್ಲಿ ದುಡಿಯುತ್ತಿದ್ದಾರೆ. ಲಾಕ್‍ಡೌನ್‍ನ ಎಲ್ಲ ಅವಧಿಯಲ್ಲೂ ಈ ಕಂಪೆನಿಯು ತೆರೆದಿತ್ತು ಎಂಬುದು ವಿಶೇಷ.

By Suddi9

Leave a Reply

Your email address will not be published. Required fields are marked *