ಪೊಳಲಿ: ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣದ ಭೂಮಿ ಪೂಜೆಯ ಪ್ರಯುಕ್ತ ದೇಶದಾದ್ಯಂತ ದೇವಸ್ಥಾನ ಭಜನಾಮಂದಿರಗಳಲ್ಲಿ ವಿಶೇಷ ಪೂಜೆ ಪ್ರಾರ್ಥನೆ ಗಳು ನಡೆಯುತ್ತಿದ್ದು ಅಂತೆಯೇ ಬಂಟ್ವಾಳ ತಾಲೂಕಿನಾದ್ಯಂತ ಶಾಸಕ ರಾಜೇಶ್ ನಾಯ್ಕ್ ಬುಧವಾರ ಬೆಳಗ್ಗೆ ಪೊಳಲಿ ದೇವಳದಲ್ಲಿ ರಾಮಮಂದಿರ ನಿರ್ಮಾಣದ ಕೆಲಸ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಲು ಪೊಳಲಿ ರಾಜರಾಜೇಶ್ವರಿ ತಾಯಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು .
ದೇವಳದ ಅರ್ಚಕ ಗಿರೀಶ್ ಭಟ್ , ಬಂಟ್ವಾಳ ಕ್ಷೇತ್ರ ದ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಬಾಳಿಕೆ , ಬಂಟ್ವಾಳ ಯುವಮೋರ್ಚಾ ಅಧ್ಯಕ್ಷ ಪ್ರದೀಪ್ ಅಜ್ಜಿ ಬೆಟ್ಟು , ಯುವಮೋರ್ಚಾ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುದರ್ಶನ ಬಜ, ತಾ.ಪಂ.ಸದಸ್ಯ ಯಶವಂತ ಪೊಳಲಿ, ವೆಂಕಟೇಶ್ ನಾವಡ, ಸುಕೇಶ್ ಚೌಟ, ಪವನ್ ಕುಮಾರ್, ನಂದರಾಮ ರೈಹಾಗೂ ಬಂಟ್ವಾಳ ಕ್ಷೇತ್ರದ ಪದಾಧಿಕಾರಿಗಳು , ಯುವಮೋರ್ಚಾದ ಪದಾಧಿಕಾರಿಗಳು ಉಪಸ್ಥಿತರಿದ್ದರು.ಈ ಸಂಧರ್ಭದಲ್ಲಿ ಬಂಟ್ವಾಳ ಕ್ಷೇತ್ರದ ಭಾರತೀಯ ಜನತಾ ಪಾರ್ಟಿಯ ವತಿಯಿಂದ ಹಮ್ಮಿಕೊಳ್ಳಲಾದ ವನಮಹೋತ್ಸವ ಕಾರ್ಯಕ್ರಮಕ್ಕೆ ಕ್ಷೇತ್ರದ ಅಧ್ಯಕ್ಷ ದೇವಪ್ಪ ಪೂಜಾರಿ ಚಾಲನೆ ನೀಡಿದರು. ಬಂಟ್ವಾಳ ಕ್ಷೇತ್ರದ ಸಂಘ ಪರಿವಾರದ ವಿವಿಧ ಪದಾಧಿಕಾರಿಗಳಾದ ಲೋಕೇಶ್ ಭರಣಿ, ಕಿಶೋರ್ ಪಲ್ಲಿಪಾಡಿ, ಸುರೇಶ್ ಮಣಿಕಂಠಪುರ, ವಾಮನ ಆಚಾರ್ಯ, ಕಾರ್ತಿಕ್ ಬಲ್ಲಾಳ್, ರಾಜ್ ಮಾರ್ಲ, ಅಶ್ವತ್ ರಾವ್ ಬಾಳಿಕೆ, ಜಯಂತ್ ಮಣಿಕಂಠಪುರ, ಸನತ್ ಅಮ್ಮುಂಜೆ,ರೋಶನ್ ಗರೋಡಿ ಮತ್ತಿತರರು ಇದ್ದರು.



