ಬಂಟ್ವಾಳ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಜು.31ರಂದು ದ.ಕ.ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದಾರೆ.ಅಂದು ಬೆಳಿಗ್ಗೆ 10 ಗಂಟೆಗೆ ಮಂಗಳೂರಿಗೆ ಅಗಮಿಸಲಿರುವ ಡಿಕೆಶಿಯವರು ರಾಜ್ಯ ಸಭಾ ಸದಸ್ಯ ಆಸ್ಕರ್ ಫೆನಾಂಡೀಸ್ ಅವರನ್ನು ಭೇಟಿಯಾಗಿ ಯೋಗಕ್ಷೇಮ ವಿಚಾರಿಸಲಿದ್ದಾರೆ.ಬಳಿಕ ಮಧ್ಯಾಹ್ನ1 ಗಂಟೆಗೆ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನಕ್ಕೆ ಭೇಟಿನೀಡುವರು.
ಅಲ್ಲಿಂದ ನೇರವಾಗಿ ಬಂಟ್ವಾಳದಲ್ಲಿ ವಾಸ್ತವ್ಯವಿರುವ ಕೇಂದ್ರದ ಮಾಜಿಸಚಿವ,ಪಕ್ಷದ ಹಿರಿಯ ಮುಖಂಡ ಜನಾರ್ದನಪೂಜಾರಿಯವರನ್ನು ಭೇಟಿಯಾಗಿ ಆರ್ಶೀವಾದವನ್ನು ಪಡೆಯುವರು.ಸಂಜೆ 4ಗಂಟೆಗೆ ಮುಡಿಪುವಿಗೆ ತೆರಳಿ ಇಸ್ಲಾಂ ಧರ್ಮಗುರು ಬೇಕಲ್ ಖಾಜಿಯವರನ್ನು ಭೇಟಿಮಾಡುವರು.ನಂತರ ಶ್ರೀಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ ಧರ್ಮಾಧಿಕಾರಿ ಡಾ.ವೀರೇಂದ್ರಹೆಗ್ಗಡೆಯವರನ್ನು ಭೇಟಿ ಮಾಡಲಿದ್ದಾರೆ.ಅಂದು ಅಲ್ಲಿಯೇ ವಾಸ್ತವ್ಯವಿದ್ದು, ಮರುದಿನ ಧರ್ಮಸ್ಥಳದಿಂದ ಮಂಗಳೂರಿಗೆ ಬಂದು ವಿಮಾನದ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಪಕ್ಷದ ಪ್ರಕಟಣೆ ತಿಳಸಿದೆ.
