ಬಂಟ್ವಾಳ: ಬಂಟ್ವಾಳ ತಾಲೂಕಿನಾದ್ಯಂತ ನಾಗರಪಂಚಮಿಯನ್ನು ಸರಳವಾಗಿ ಆಚರಿಸಲಾಯಿತು. ದೇವಸ್ಥಾನಗಳಲ್ಲಿ ಪ್ರತಿ ವರ್ಷ ನಾಗರಪಂಚಮಿಯಂದು ಭಕ್ತರು ಕಂಡುಬರುತ್ತಿದ್ದರೆ, ಈ ವರ್ಷ ಭಕ್ತರು ಮನೆಯಲ್ಲೇ ನಾಗದೇವರಿಗೆ ಪ್ರಾರ್ಥನೆ ಸಲ್ಲಿಸಿದರು. ಬಿ.ಸಿ.ರೋಡಿನ ಶ್ರೀ ರಕ್ತೇಶ್ವರಿ ದೇವಿ ಸನ್ನಿಧಿ ಸಹಿತ ಹಲವೆಡೆ ಪೂಜೆಗಳು ನಡೆದವು. ಕೆಲವು ಕುಟುಂಬದವರು ಒಟ್ಟಾಗಿ ಮನೆಯ ನಾಗನಕಟ್ಟೆಯಲ್ಲಿ ಪೂಜೆ ಸಲ್ಲಿಸಿದರು.
