ಬಂಟ್ವಾಳ :  ತಾಲೂಕಿನ ಕಾವಳಪಡೂರು ಗ್ರಾಮದ ವಗ್ಗ-ಕಕ್ಯಪದವು ರಸ್ತೆ ಬದಿಯಲ್ಲಿ ಎಸೆಯಲಾಗಿದ್ದ  ತ್ಯಾಜ್ಯ ಮತ್ತು  ಕಸದ ರಾಶಿಯನ್ನು ತುಳುನಾಡ ಪೊರ್ಲು ಸೇವಾ ಟ್ರಸ್ಟ್  ಸದಸ್ಯರು, ಅರಣ್ಯ ಇಲಾಖೆ ಹಾಗೂ ಗ್ರಾ.ಪಂ.ಜಂಟಿಯಾಗಿ ಸ್ವಚ್ಛತೆಗೊಳಿಸಿದರು.

IMG-20200723-WA0076
ಭೂ ಕೈಲಾಸ  ಪ್ರತೀತಿಯ  ಶ್ರೀ ಕಾರಿಂಜೇಶ್ವರ ದೇವಸ್ಥಾನ ಸಮೀಪವಿರುವ  ಕೊಡ್ಯಮಲೆ ರಕ್ಷಿತಾರಣ್ಯದ ನಡುವೆ ಹಾದು ಹೋಗಿರುವ ಈ ರಸ್ತೆ ಬದಿ ತ್ಯಾಜ್ಯವನ್ನು ಎಸೆಯಲಾಗಿದ್ದು,ಪರಿಣಾಮ ಪರಿಸರವಿಡಿ ರ್ದುನಾತ ಬೀರುತಿತ್ತು.  ಆಸ್ಪತ್ರೆ, ಕ್ಲಿನಿಕ್‌ಗಳಲ್ಲಿ  ಬಳಸಿದ ವಸ್ತು, ಕೋಳಿ ಮಾಂಸದ ಅಂಗಡಿಯ ತ್ಯಾಜ್ಯ ಕ್ಷೌರದಂಗಡಿ , ಗೃಹ  ತ್ಯಾಜ್ಯ, ಮದ್ಯದ ಬಾಟಲಿಗಳು, ದೈವಾರಾಧನೆಗೆ ಉಪಯೋಗಿಸಿದ ವಸ್ತುಗಳಿಂದ ಹಿಡಿದು ಎಲ್ಲಾ  ತ್ಯಾಜ್ಯವನ್ನು ತಂದು ರಸ್ತೆ ಬದಿಯಲ್ಲಿ ಸುರಿಯಲಾಗಿತ್ತು.IMG-20200723-WA0080

ಇದನ್ನು ಗಮನಿಸಿದ ತುಳುನಾಡ ಪೊರ್ಲು ಸೇವಾ ಟ್ರಸ್ಟ್ ಸದಸ್ಯರು  ಗ್ರಾ.ಪಂ. ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಅವರ ಸಹಕಾರದೊಂದಿಗೆ ಸಂಪೂರ್ಣ ಸ್ವಚ್ಛತಾ ಕಾರ್ಯವನ್ನು  ನಡೆಸಿದರು.  ಬಂಟ್ವಾಳ  ಅರಣ್ಯಾಧಿಕಾರಿ  ಮತ್ತು ಸಿಬಂದಿಗಳು, ಕಾವಳಪಡೂರು ಗ್ರಾ.ಪಂ. ಪಿಡಿಒ ಮತ್ತು ಸಿಬಂದಿಗಳು ಈ ಸ್ವಚ್ಚತಾ ಕಾರ್ಯಕ್ಕೆ ಸಾಥ್ ನೀಡಿದರು.

By suddi9

Leave a Reply

Your email address will not be published. Required fields are marked *